ಕಾಂಗ್ರೆಸ್ಸಿಗರೇ, ದಲಿತರಿಗೆ ಮೀಸಲಾತಿ ನೀಡಿದರೆ ನಿಮಗೇನು ಸಮಸ್ಯೆ?: ಬಿಜೆಪಿ ಕಿಡಿ

bjp congress
  • ಕಾಂಗ್ರೆಸ್ಸಿಗರೇ, ದಲಿತರಿಗೆ ಮೀಸಲಾತಿ ನೀಡಿದರೆ ನಿಮಗೇನು ಸಮಸ್ಯೆ?
  • ಕಾಂಗ್ರೆಸ್‌ ಇಂದು ಮೊಸರಲ್ಲಿ ಕಲ್ಲು ಹುಡುಕುತ್ತಿರುವುದೇಕೆ ಎಂದು ಪ್ರಶ್ನೆ

“ಸರ್ಕಾರ ಮೀಸಲಾತಿ ನಿರ್ಧಾರ ಕೈಗೊಂಡ ಬಳಿಕ ಸಿದ್ದರಾಮಯ್ಯ ಅವರಿಗೆ ಅನುಮಾನದ ಭೂತ ಹುಟ್ಟಿಕೊಂಡಿದೆ. ಸರ್ವಪಕ್ಷ ಸಭೆ ಕರೆದು ಮೀಸಲಾತಿ ಹೆಚ್ಚಳ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಯ ಪಡಿಸಲಾಗಿದೆ. ಆದರೂ ಈಗ ಕಾಂಗ್ರೆಸ್ ತಕರಾರು ಎತ್ತುತ್ತಿದೆ. ಕಾಂಗ್ರೆಸ್ಸಿಗರೇ, ದಲಿತರಿಗೆ ಮೀಸಲಾತಿ ನೀಡಿದರೆ ನಿಮಗೇನು ಸಮಸ್ಯೆ?” ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಮೀಸಲಾತಿ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, “ಸಾಂವಿಧಾನಿಕ ಬಿಕ್ಕಟ್ಟುಗಳನ್ನು ಎದುರಿಸಲು ಮತ್ತು ನಿವಾರಿಸಲು ಬಸವರಾಜ ಬೊಮ್ಮಾಯಿ ಸರ್ಕಾರ ಸನ್ನದ್ಧವಾಗಿದೆ. ನ್ಯಾಯ ಮಾರ್ಗದಲ್ಲೇ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕೊಡಿಸುತ್ತೇವೆ. ಅಧಿಕಾರದಲ್ಲಿದ್ದಾಗ ಪರಿಶಿಷ್ಟ ವರ್ಗದವರ ನ್ಯಾಯಯುತ ಬೇಡಿಕೆಯನ್ನು ತಿರಸ್ಕರಿಸಿದ ಕಾಂಗ್ರೆಸ್‌ ಇಂದು ಮೊಸರಲ್ಲಿ ಕಲ್ಲು ಹುಡುಕುತ್ತಿರುವುದೇಕೆ” ಎಂದು ಪ್ರಶ್ನಿಸಿದೆ.

Eedina App

“ಪರಿಶಿಷ್ಟ ವರ್ಗದ ಮೀಸಲಾತಿ ಏರಿಕೆ ಮಾಡಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಿದ್ದೆಗೆಡುವಂತೆ ಮಾಡಿದೆ. ಮೀಸಲಾತಿ ಏರಿಸುವಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರೂ ಗಣನೆಗೆ ತೆಗೆದುಕೊಂಡಿಲ್ಲವೆಂದು ಸ್ವಾಮೀಜಿಗಳು ಹೇಳಿದ್ದಾರೆ. ಕಾಂಗ್ರೆಸ್ ಮೀಸಲಾತಿಗೆ ವಿರೋಧಿಸಿದ್ದೇಕೆ?” ಎಂದು ಕುಟುಕಿದೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
1 ವೋಟ್
eedina app