
- ಮನ್ರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ
- ಕಾನೂನುಬಾಹಿರ ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪ
ಖಾಸಗಿ ನಿವೇಶನವನ್ನು ಅತಿಕ್ರಮಣ ಮಾಡಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರು ಗ್ರಾಮದ ಆಶಾ ಬಿ ನಡುವಿನಮನಿ ಅವರು ಆರೋಪಿಸಿದ್ದಾರೆ.
“ನಿವೇಶನ ಸಂಖ್ಯೆ 181/1ರಲ್ಲಿ ಮನ್ರೇಗಾ ಯೋಜನೆಯಡಿ 2021ರಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲು ಮುಂದಾದಾಗ ಆಕ್ಷೇಪ ಮಾಡಿದ್ದೆವು. ಮತ್ತೊಮ್ಮೆ ಕಟ್ಟಡ ಮುಂದುವರಿಸಲು ಪ್ರಯತ್ನಿಸಿದಾಗ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆವು. ನಗರದ ಹಿರಿಯ ಸಿವಿಲ್ ನಿರ್ದೇಶಕರ ನ್ಯಾಯಾಲಯ ಅಂತಿಮ ನಿರ್ಣಯ ಬರುವವರೆಗೂ ಸದರಿ ನಿವೇಶನದಲ್ಲಿ ಅತಿಕ್ರಮ ಪ್ರವೇಶಿಸಿದಂತೆ ತಡೆಯಾಜ್ಞೆ ನೀಡಿತ್ತು” ಎಂದು ಆಶಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉಡುಪಿ | ದಲಿತ ಮುಖಂಡರಿಂದ ಬ್ರಹ್ಮಾವರ ಪೊಲೀಸ್ ಠಾಣೆ ಮುತ್ತಿಗೆಗೆ ಯತ್ನ
“ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಲು ಮುಂದಾದಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ (ಸಿಇಓ)ಗೆ ದೂರು ಸಲ್ಲಿಸಿದ್ದೇವೆ. 2013ರಿಂದ 2021ರವರೆಗೆ ಮನೆ ತೆರಿಗೆ ಪಾವತಿಸಲಾಗಿದೆ. ಈ ವಿಷಯವನ್ನೇ ಇಟ್ಟುಕೊಂಡು ಜಿಲ್ಲಾ ಎಸ್ಪಿ, ಸಿಒ, ಸ್ಥಳೀಯ ಡಿವೈಎಸ್ಪಿ ಬಳಿ ಹೋಗಿದ್ದೇವೆ. ಇಲ್ಲಿಯವರೆಗೂ ಯಾವ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಪಿಡಿಒ ನಮ್ಮ ಮನೆಗೆ ಬಂದು ಅವಾಚ್ಯ ಪದಗಳಿಂದ ನನಗೆ ಮತ್ತು ನನ್ನ ಪತ್ನಿಗೆ ನಿಂದಿಸಿದ್ದಾನೆ ಎಂದು ಆಶಾ ಅವರ ಗಂಡ ರಾಜಾಸಾಬ್ ಅವರು ಅಳಲು ತೋಡಿಕೊಂಡಿದ್ದಾರೆ.