
- ʼಉಗ್ರ ಚಟುವಟಿಕೆಯ ಭಾಗವೆಂದು ಪರಿಗಣಿಸಿ ತನಿಖೆಯನ್ನು ಎನ್ಐಎಗೆ ವಹಿಸಬೇಕುʼ
- ʼಮಹಾರಾಷ್ಟ್ರವು ಮಹಾಜನ್ ಆಯೋಗದ ವರದಿ ಉಲ್ಲಂಘಿಸಿ, ಅಪಮಾನ ಮಾಡಿದೆʼ
ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಬಹಳ ದೊಡ್ಡ ಜಾಲವಿದ್ದು, ಇದು ಉಗ್ರ ಚಟುವಟಿಕೆಯ ಒಂದು ಭಾಗವೆಂದು ಪರಿಗಣಿಸಬೇಕು ಮತ್ತು ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ವಿಜಯಪುರದಲ್ಲಿ ಮಾತನಾಡಿದ ನಗರದಲ್ಲಿ ಮಾತನಾಡಿದ ಅವರು, “ಇದು ಮಂಗಳೂರಿನ ಒಂದು ಸಣ್ಣ ಟಿಫಿನ್ ಬಾಕ್ಸ್ ಬಾಂಬ್ ಅಲ್ಲ. ಇದರ ಹಿಂದೆ ದೇವಸ್ಥಾನಗಳನ್ನು ನಾಶ ಮಾಡುವ ಹುನ್ನಾರವಿದೆ” ಎಂದರು.
“ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಈವರೆಗೂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಏಕೆ ಮಾತನಾಡಿಲ್ಲ. ಜೆಡಿಎಸ್ಗೆ ಬಹುಮತ ಬಂದರೆ ಮುಸ್ಲಿಂ ಸಿಎಂ ಎಂದು ಎಚ್ ಡಿ ಕುಮಾರಸ್ವಾಮಿ ಹೇಳುತ್ತಾರೆ. ಇವರೆಲ್ಲ ಮುಸ್ಲಿಮರನ್ನು ತುಷ್ಟೀಕರಿಸಲು ಯತ್ನಿಸುತ್ತಿದ್ದಾರೆ ಅಷ್ಟೇ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ದಿನ ನಿಷೇಧಿತ ಸ್ಯಾಟ್ಲೈಟ್ನಿಂದ ಫೋನ್ ಸಂವಹನ; ಶೋಧ ಆರಂಭ
ಮಹಾಜನ್ ಆಯೋಗಕ್ಕೆ ಮಹಾರಾಷ್ಟ್ರ ಅಪಮಾನ
“ಭಾಷಾವಾರು ಪ್ರಾಂತದ ಆಧಾರದ ಮೇಲೆ, ಪ್ರಾಂತಗಳ ಪುನರ್ ವಿಂಗಡಣೆ ಆಗಿದೆ. ಮಹಾರಾಷ್ಟ್ರದವರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಮಹಾಜನ್ ಆಯೋಗ ರಚನೆ ಮಾಡಿತ್ತು. ಅದನ್ನು ಒಪ್ಪಿಕೊಳ್ಳುವ ಧರ್ಮ ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳದ್ದೂ ಇದೆ. ಈಗ ಅವರೇ ಉಲ್ಟಾ ಬಿದ್ದಿದ್ದಾರೆಂದರೆ ಇದು ಮಹಾಜನ್ ಆಯೋಗಕ್ಕೆ ಮಾಡಿದ ಅಪಮಾನ” ಎಂದರು.
“ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವಂತಹ ಅವಶ್ಯಕತೆ ಇಲ್ಲ. ಯಾಕಂದರೆ ಮಹಾಜನ್ ಆಯೋಗದ ವರದಿಯನ್ನು ಒಪ್ಕೋಬೇಕು. ಇಲ್ಲದಿದ್ದಲ್ಲಿ ಮಹಾರಾಷ್ಟ್ರದವರು ಸುಮ್ಮನೆ ಇರಬೇಕು” ಎಂದು ಶಾಸಕ ಯತ್ನಾಳ ವಾಗ್ದಾಳಿ ಮಾಡಿದರು.