
- ʼರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರʼ ಬಗ್ಗೆ ಮಾತನಾಡುವಾಗ ಅಭಿಮತ
- ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ʼರಾಷ್ಟ್ರೀಯ ಪತ್ರಿಕಾ ದಿನʼ ಆಚರಣೆ
ರಾಷ್ಟ್ರವನ್ನು ಸಧೃಢವಾಗಿ ಕಟ್ಟುವ ಕನಸು ಈವರೆಗೂ ನಿಜವಾಗಿಲ್ಲ. ದೇಶದ ಪ್ರಗತಿ ಎಂದರೆ ಕೇವಲ ರಸ್ತೆ, ಕಟ್ಟಡ ಕಟ್ಟುವುದಲ್ಲ. ಮನುಷ್ಯ ಪ್ರಗತಿ ಹೊಂದುವುದೇ ನಿಜವಾದ ರಾಷ್ಟ್ರ ನಿರ್ಮಾಣ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ʼರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರʼ ವಿಷಯವಾಗಿ ಅವರು ಮಾತನಾಡಿದರು.
ಕೇವಲ ರಾಜಕೀಯ ಸ್ವಾತಂತ್ರ್ಯ ಗಾಂಧೀಜಿಯ ಕನಸಾಗಿರಲಿಲ್ಲ. ದೇಶದ ಆಯಾ ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗಬೇಕಿತ್ತು. ಅದು ಸಾಧ್ಯವಾಗಿಲ್ಲ. ನಮಗೆ ಬೇಕಾಗಿದ್ದನ್ನು ನಾವು ದೇಶದಲ್ಲಿ ನಿರ್ಮಿಸಿಕೊಳ್ಳಲಿಲ್ಲ. ಬ್ರಿಟಿಷರ ಹೆಜ್ಜೆಯಲ್ಲೇ ನಾವು ಸಾಗಿದೆವು” ಎಂದರು.
“ಪ್ರತಿಯೊಬ್ಬ ಮನುಷ್ಯ ಸ್ವಾಭಿಮಾನಿಯಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಅದು ನಿಜವಾದ ರಾಷ್ಟ್ರ ನಿರ್ಮಾಣ. ಭಾರತ ಸಂಪೂರ್ಣವಾಗಿ ಈವರೆಗೂ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಸದಾ ಚಾಟಿ ಬೀಸುವ ಕಾರ್ಯ ಮಾಧ್ಯಮಗಳಿಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮಾಧ್ಯಮಗಳು ಕೋಮು ದ್ವೇಷ, ಜಾತಿ ವಿಷಯ ಎತ್ತಿಕಟ್ಟಿ ಬರೆಯಬಾರದು: ಸಚಿವ ಜೆ ಸಿ ಮಾಧುಸ್ವಾಮಿ
“ಯಾರದೋ ವೈಯಕ್ತಿಕ ಬದುಕು ಹಾಳಾಗುವ ರೀತಿ ವರದಿ ಬರೆಯುವ ಮುನ್ನ ಪತ್ರಕರ್ತರು ಯೋಚಿಸಬೇಕು. ಕೋಮುದ್ವೇಷ, ಜಾತಿ ಎತ್ತಿಕಟ್ಟಿ ಬರೆಯಬಾರದು. ಇದರಿಂದ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಬಹುತ್ವದ ಭಾರತ ಉಳಿಯಬೇಕು. ಇಡೀ ದೇಶ ನನ್ನದು ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಸರಳ ಜೀವನ ಕ್ರಮ ಜನರಲ್ಲಿ ಮೂಡಿಸಬೇಕು. ಶಾಂತಿ, ಸಮಾಧಾನಕರ ಜೀವನವನ್ನು ಪ್ರತಿಯೊಬ್ಬರು ನಡೆಸುವಂತಾಗಬೇಕು” ಎಂದು ಹೇಳಿದರು.