ಭಾರತ್‌ ಜೋಡೋ ಯಾತ್ರೆಗೆ ಸಾಂಸ್ಕೃತಿಕ ಸ್ಪಂದನೆ; ಕಲಾಕೃತಿಗಳಲ್ಲಿ ಮೂಡಿದ ಪಾದಯಾತ್ರೆ

ಡಿ ಕೆ ಶಿವಕುಮಾರ್
  • ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನ
  • ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಚಾಲನೆ

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸುಮಾರು 3,500 ಕಿ.ಮೀ ಸಾಗುತ್ತಿರುವ ಭಾರತ್‌ ಜೋಡೋ ಪಾದಯಾತ್ರೆಯ ಅವಿಸ್ಮರಣೀಯ ಘಟನೆಗಳನ್ನು ಸಾರುವ ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನಕ್ಕೆ ಚಿತ್ರಕಲಾ ಪರಿಷತ್‌ನಲ್ಲಿ ಬುಧವಾರ ಚಾಲನೆ ನೀಡಲಾಯಿತು. 

ಬೆಂಗಳೂರಿನ ʼಬಿ ಕಲ್ಚರ್‌ʼ ಮತ್ತು ತುಮಕೂರಿನ ʼಜನಸ್ಪಂದನʼ ಸಂಸ್ಥೆಗಳ ಸಹಯೋಗದಲ್ಲಿ ʼಪುನರುಜ್ಜೀವನʼ ಪರಿಕಲ್ಪನೆಯಡಿ ನಡೆದ ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕ್ಯಾನ್‌ವಾಸ್‌ನಲ್ಲಿ ಸಹಿಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.  

Eedina App

ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನದಲ್ಲಿ 23 ಚಿತ್ರ ಕಲಾವಿದರು ಭಾರತ್‌ ಜೋಡೋ ಪಾದಯಾತ್ರೆ ಬಗ್ಗೆ ಸಾಂಸ್ಕೃತಿಕ ನೋಟದ ಮೂಲಕ ಭಿನ್ನ ಭಿನ್ನ ಆಯಾಮಗಳಲ್ಲಿ ಚಿತ್ರ ಬಿಡಿಸಿದ್ದು ವೀಕ್ಷಕರ ಗಮನ ಸೆಳೆಯಿತು. ಸಂವಿಧಾನ ಉಳಿವು, ಜೀವಪರ ಚಿಂತನೆಯ ಭಾರತದ ಕಲ್ಪನೆ, ಮಹಾತ್ಮಾ ಗಾಂಧಿಯ ಪ್ರಸ್ತುತತೆ, ಕರ್ನಾಟಕದ ಕೌದಿಯ ರೂಪಕದಲ್ಲಿ ಭಾರತದ ಚಿಂತನೆ, ವಿವಿಧ ಧರ್ಮಗಳನ್ನು ಒಗ್ಗೂಡಿಸುವ ಒಗ್ಗಟ್ಟು ಪ್ರದರ್ಶನ, ರೊಟ್ಟಿ ಚಿತ್ರ ಹೀಗೆ ಹಲವು ಆಯಾಮಗಳಲ್ಲಿರುವ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಹಾಗೆಯೇ ಭಾರತ್‌ ಜೋಡೋ ಯಾತ್ರೆಯಲ್ಲಿ ಗಮನ ಸೆಳೆದ ಪ್ರಮುಖ ಛಾಯಾಚಿತ್ರಗಳನ್ನೂ ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕದಲ್ಲಿ ಯಾತ್ರೆ ಆರಂಭದಿಂದ ಹಿಡಿದು ಯಾತ್ರೆಯ ಕೊನೆವರೆಗಿನ ಪ್ರಮುಖ ಬೆಳವಣಿಗೆಗಳನ್ನು ಸೆರೆ ಹಿಡಿದ ಫೋಟೋಗಳು ಅಲ್ಲಿದ್ದವು. ಸೋನಿಯಾ ಗಾಂಧಿ ಹೆಜ್ಜೆ ಹಾಕಿದ ಗಳಿಗೆ, ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಓಡಿದ ಚಿತ್ರ, ಜನಸಾಮಾನ್ಯರೊಂದಿಗೆ ರಾಹುಲ್‌ ಬೆರೆತು ಮಾತನಾಡಿದ ಕ್ಷಣಗಳನ್ನು ಸೆರೆ ಹಿಡಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 

AV Eye Hospital ad
ಚಿತ್ರಕಲಾ ಪರಿಷತ್

ಈ ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನ ಪರಿಕಲ್ಪನೆಯ ರೂವಾರಿ ದಿಲಾವರ್‌ ರಾಮದುರ್ಗ ʼಈ ದಿನ.ಕಾಮ್‌ʼ ಜೊತೆ ಮಾತನಾಡಿ, “ರಾಹುಲ್‌ ಗಾಂಧಿ ಅವರು ದೇಶವನ್ನು ಒಗ್ಗೂಡಿಸುವ ಭಾಗವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ನಾಡಿನ ಸಾಂಸ್ಕೃತಿಕ ವಲಯ ಸ್ಪಂದಿಸಬೇಕಾಗಿರುವುದು ಅದರ ಜವಾಬ್ದಾರಿ. ಹೀಗಾಗಿ ಭಾರತ್‌ ಜೋಡೋ ಯಾತ್ರೆಗೆ ಸಾಂಸ್ಕೃತಿಕ ಸ್ಪಂದನೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದರು.

“ದೇಶದಲ್ಲಿ ಕೋಮುವಾದ ದಿನೇ ದಿನೇ ಹೆಚ್ಚುತ್ತಿದೆ. ಭಾರತದ ಭವಿಷ್ಯದ ದಿನಗಳು ನೆನಸಿಕೊಂಡರೆ ಭಯವಾಗುತ್ತಿದೆ. ಇದಕ್ಕೆಲ್ಲ ಚಿಕಿತ್ಸೆ ರೂಪದಲ್ಲಿ ರಾಹುಲ್‌ ಅವರು ಹೆಜ್ಜೆ ಹಾಕುತ್ತಿದ್ದಾರೆ. ನಾವಿದನ್ನು ಭಾರತದ ಪುನರುಜ್ಜೀವನ ಎಂದೇ ಭಾವಿಸಿಕೊಂಡಿದ್ದೇವೆ. ಈ ದುರೀತ ಕಾಲದಲ್ಲಿ ಪಾದಯಾತ್ರೆ ಸಂವಿಧಾನದ ಉಳಿವನ್ನು ಜನರಿಗೆ ಮನವರಿಕೆ ಮಾಡುತ್ತಿದೆ” ಎಂದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್‌ ದ್ವಾರಕಾನಾಥ್‌ ಪ್ರತಿಕ್ರಿಯಿಸಿ, “ಪ್ರತಿಯೊಂದು ಛಾಯಾಚಿತ್ರ ಮತ್ತು ಚಿತ್ರಕಲೆ ಒಂದೊಂದು ರೂಪಕವಾಗಿ ನಮ್ಮ ಮುಂದಿವೆ. ರಾಹುಲ್‌ ಗಾಂಧಿ ಅವರ ಪಾದಯಾತ್ರೆಗೆ ನಾಡಿನ ಸಾಂಸ್ಕೃತಿಕ ವಲಯ ಈ ರೀತಿ ಸ್ಪಂದಿಸಿರುವುದು ಇದೇ ಮೊದಲು ಅನ್ನಿಸುತ್ತದೆ” ಎಂದು ಹೇಳಿದರು.

ಡಿ ಕೆ ಶಿವಕುಮಾರ್

ರಾಜಮನೆತನಗಳ ಕಾಲದಿಂದ ಹಿಡಿದು ಪ್ರಜಾಪ್ರಭುತ್ವದ ಕಾಲಘಟ್ಟದವರೆಗೂ ಆಯಾ ಕಾಲದ ಸಂದಿಗ್ಧತೆಗಳ ಬಗ್ಗೆ, ರಾಜಕೀಯ ನಡೆ ಬಗ್ಗೆ ಕಲಾವಿದರು ಸ್ಪಂದಿಸುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಚಿತ್ರಗಳು ವಿಭಿನ್ನ ಮಾದರಿಯ ಚಿತ್ರಗಳು. ಒಂದೊಂದು ಚಿತ್ರ ಒಂದೊಂದು ದೇಶದ ಕಥೆಗಳನ್ನು ಬಿಚ್ಚಿಡುತ್ತವೆ” ಎಂದರು.

ಈ ಸುದ್ದಿ ಓದಿದ್ದೀರಾ? ದೇಶ ಹಿಂದೆಂದೂ ಇಂತಹ ರಾಜಕೀಯ ದ್ವೇಷ ಕಂಡಿರಲಿಲ್ಲ: ಸಂಜಯ್ ರಾವುತ್ ಕಿಡಿ

ಜನಸ್ಪಂದನ ಟ್ರಸ್ಟ್‌ನ ಡಾ ಶಶಿಧರ್‌ ಮಾತನಾಡಿ, “ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುವ ಚಿಂತನೆ ಇದೆ. ನಂತರದಲ್ಲಿ ಮೈಸೂರು, ತುಮಕೂರು, ಧಾರವಾಡ ಹೀಗೆ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಭಾರತ್‌ ಜೋಡೋ ಯಾತ್ರೆಯ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ” ಎಂದು ತಿಳಿಸಿದರು.

ಕಲಾವಿದ ಎಂ ಜಿ ದೊಡ್ಡಮನಿ ಮಾತನಾಡಿ, “ರಾಹುಲ್‌ ಗಾಂಧಿ ಅವರ ಪಾದಯಾತ್ರೆಯಲ್ಲಿ ನಾವು ಭಾಗಿಯಾಗಿ ನಮ್ಮ ಅನುಭವಗಳನ್ನು ಚಿತ್ರಕಲೆಯಲ್ಲಿ ಸೆರೆಹಿಡಿದಿದ್ದೇವೆ.  ಇಡೀ ಯಾತ್ರೆ ದೇಶದ ಒಗ್ಗಟ್ಟನ್ನು ಪ್ರದಿಪಾದಿಸಿದೆ. ಅದಕ್ಕೊಂದು ರೂಪಕ ಕೊಟ್ಟು ಚಿತ್ರ ರಚಿಸಿದ್ದೇನೆ. ದೇಶದ ಇತಿಹಾಸದಲ್ಲಿ ಈ ಯಾತ್ರೆ ಹೊಸ ಮೈಲುಗಲ್ಲು ಸೃಷ್ಟಿಸಲಿದೆ” ಎಂದು ಆಶಯ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app