
ವೈದ್ಯಕೀಯ ಸಿಬ್ಬಂದಿಗಾಗಿ ಕಾಯದೆ ಅಪರಿಚಿತ ಶವವನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ ಹೆಡ್ ಕಾನ್ಸ್ಟೇಬಲ್ ಸಂಪತ್ ಬಂಗೇರ ಅವರ ಕೆಲಸವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರಶಂಸಿದ್ದಾರೆ.
“ಸಂಪತ್ ಬಂಗೇರಾ ಅವರು ಕರ್ತವ್ಯದಲ್ಲಿದ್ದಾಗ ನಗರದ ಮಿನಿವಿಧಾನಸೌಧದ ಬಳಿ ವೃದ್ಧರೊಬ್ಬರ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಮೃತದೇಹವನ್ನು ವೈದ್ಯಕೀಯ ಸಿಬ್ಬಂದಿಗಾಗಿ ಕಾಯದೆ, ಸ್ವತಃ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ” ಎಂದು ಶಶಿಕುಮಾರ್ ತಿಳಿಸಿದರು.
ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯವನ್ನು ಮೆಚ್ಚಿ, ಅವರಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕ್ಯೂಆರ್ ಕೋಡ್ ಮೂಲಕ ಹೊರರೋಗಿ ನೋಂದಣಿ