ದಕ್ಷಿಣ ಕನ್ನಡ | ಪ್ರತಿಮೆ ಅನಾವರಣಕ್ಕೆ ಸಿದ್ಧತೆ ಆರಂಭ: ಸಚಿವ ಸುನೀಲ್ ಕುಮಾರ್

ಇಂಧನ ಸಚಿವ ಸುನೀಲ್
  • ‌ನವೆಂಬರ್ 19ರಂದು ಕೆದಂಬಾಡಿ ರಾಮಯ್ಯಗೌಡರ ಪುತ್ಥಳಿ ಅನಾವರಣ
  • ಪುತ್ಥಳಿ ಅನಾವರಣದಂದು ಕನಿಷ್ಠ 25,000 ಜನರು ಭಾಗವಹಿಸುವ ಸಾಧ್ಯತೆ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಪುತ್ಥಳಿ ಅನಾವರಣ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “1837ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ನೆಡೆಸಿದ್ದ ಗೌಡರ ಪ್ರತಿಮೆಯನ್ನು ಮಂಗಳೂರಿನ ಬಾವುತಗುಡ್ಡೆಯಲ್ಲಿ ನಿರ್ಮಾಣ ಮಾಡಲಾಗಿದೆ. ನವೆಂಬರ್ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆ ಅನಾವರಣಗೊಳಿಸಲಿದ್ದಾರೆ" ಎಂದು ತಿಳಿಸಿದರು.

"ಪ್ರತಿಮೆ ಅನಾವರಣ ಸಮಾರಂಭವನ್ನು ಸುವ್ಯವಸ್ಥಿತವಾಗಿ ನಡೆಸಬೇಕು. ಬಸವರಾಜ ಬೊಮ್ಮಾಯಿ ಅವರು ಅತಿಥಿಯಾಗಿ ಭಾಗವಹಿಸುವುದರಿಂದ, ಎಲ್ಲ ರೀತಿಯ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ಕನಿಷ್ಠ 25,000 ಜನರು ಭಾಗವಹಿಸುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮೈಸೂರು | ಬಸ್‌ ನಿಲ್ದಾಣದ ವಿನ್ಯಾಸ ಅರಮನೆ ಮಾದರಿಯೇ ಹೊರತು, ಧರ್ಮದ ಆಧಾರವಲ್ಲ: ಪ್ರತಾಪ್ ಸಿಂಹ ಆರೋಪಕ್ಕೆ ಶಾಸಕ ರಾಮದಾಸ್ ಉತ್ತರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಕ್ಷ ರಂಗಾಯಣವು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಮತ್ತು ಅಮರ ಸುಳ್ಯ ದಂಗೆ ಕುರಿತು ರಾಜ್ಯಾದ್ಯಂತ ನಾಟಕವನ್ನು ಪ್ರದರ್ಶಿಸಿ ಗೌರವ ಸಲ್ಲಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app