ದಾವಣಗೆರೆ | ನ.26ರಂದು ಸಂವಿಧಾನ ಸಮರ್ಪಣಾ ದಿನಾಚರಣೆ

DAVANAGERE
  • ‘ಸಂವಿಧಾನದ ಆಶಯಗಳನ್ನು ಈಡೇರಿಸುವುದು ಎಲ್ಲರ ಜವಾಬ್ದಾರಿ’
  •  ಕಾರ್ಯಕ್ರಮದ ಭಾಗವಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ಸುಮಾರು 28ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್‍‌ ನಮಗೆ ನೀಡಿದ್ದಾರೆ. ಸಂವಿಧಾನವನ್ನು ಸಂಸತ್ತಿನಲ್ಲಿ ಮಂಡಿಸಿದ ದಿನದ ಅಂಗವಾಗಿ 'ಪ್ರಜಾ ಪರಿವರ್ತನಾ ವೇದಿಕೆ'ಯಿಂದ ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲು ಮುಂದಾಗಿದ್ದೇವೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಎ.ಡಿ ಈಶ್ವರಪ್ಪ ಹೇಳಿದರು.

“ಇತ್ತೀಚಿನ ದಿನಗಳಲ್ಲಿ ಪ್ರತಿ ಕ್ಷಣವೂ ಚರ್ಚೆಯಾಗುತ್ತಿರುವ ವಿಷಯ ಎಂದರೆ, ಅದು ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚಿಸಲು ಹಲವಾರು ವರ್ಷ ಶ್ರಮಿಸಿದ್ದರು. ಸಂವಿಧಾನದ ಆಶಯಗಳನ್ನು ಈಡೇರಿಸುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದರು.

”1949 ನವೆಂಬರ್ 26ರಂದು ಸಂವಿಧಾನವನ್ನು ಈ ದೇಶಕ್ಕೆ ಸಮರ್ಪಣೆ ಮಾಡಿದ ದಿನವಾಗಿದೆ. ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ಅಂಬೇಡ್ಕರ್ ಭವನದಲ್ಲಿ ನವೆಂಬರ್ 26ರಂದು ಸಾಂಕೇತಿಕವಾಗಿ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಗದಗ | ನ.26ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

“ಸಂವಿಧಾನ ಸಮರ್ಪಣಾ ದಿನದ ಆಚರಣೆ ಜೊತೆಗೆ ಕನ್ನಡ ನಾಡು ಕಂಡ ಅಪ್ರತಿಮಾ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನೂ ಆಚರಿಸಲು ನಿರ್ಧರಿಸಿದ್ದೇವೆ. ಪ್ರಜಾ ಪರಿವರ್ತನಾ ವೇದಿಕೆಯಿಂದ ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನೂ ಆಚರಿಸುತ್ತಿದ್ದು, ಮೂರು ಕಾರ್ಯಕ್ರಮಗಳನ್ನು ಒಟ್ಟಿಗೆ ಆಚರಿಸಲಾಗುತ್ತದೆ” ಎಂದರು.

Image
DAVANAGERE

“ನ.26ರ ಕಾರ್ಯಕ್ರಮದಲ್ಲಿ ಬಹುಜನ ಚಳುವಳಿಯ ನೇತಾರ ಡಾಕ್ಟರ್ ಸೈಯದ್ ರೋಷನ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂವಿಧಾನದ ಕುರಿತು ಚೆನ್ನೇಶ್ವರ್ ಎ.ಕೆ ಮಾತನಾಡಲಿದ್ದಾರೆ. ದಲಿತ ಸಂಘಟನೆಗಳು, ಮುಸ್ಲಿಂ ಮುಖಂಡರುಗಳು ಮತ್ತು ಇತರ ಎಲ್ಲ ಜಾತಿಯ ಮುಖಂಡರಿಗೂ ಆಹ್ವಾನ ನೀಡುತ್ತಿದ್ದೇವೆ. ಸುಮಾರು 600 ರಿಂದ 1000 ಜನ ಪಾಲ್ಗೊಳ್ಳುವ ಸಾಧ್ಯತೆಯಿದೆ” ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಜಾ ಪರಿವರ್ತನ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಮುಖಂಡರಾದ ನಜೀರ್ ಅಹ್ಮದ್, ಮುಜಾಮಿಲ್ ಖಾನ್, ಶಿವಮೂರ್ತಿರಾಂಪುರ, ರಮೇಶ್ ಐನೂರು, ಸಿದ್ದಪ್ಪ ಸಿಂಗಟಗೆರೆ, ಅಣ್ಣಪ್ಪ, ಜಿಷನ್, ಮಹೇಶ್, ಶಾಂತರಾಜು ಮತ್ತಿತ್ತರು ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ದಾವಣಗೆರೆ ಜಿಲ್ಲಾ ಸಂಯೋಜಕ ವಿನಯ್‌ಕುಮಾರ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180