ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ದೇವನಹಳ್ಳಿ: ಸಚಿವ ಸುಧಾಕರ್

  • ಮುಂದಿನ ಒಂದು ತಿಂಗಳಲ್ಲಿ ದೇವನಹಳ್ಳಿ ಜಿಲ್ಲಾ ಕೇಂದ್ರದ ಕುರಿತು ಅಧಿಕೃತ ಆದೇಶ
  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಗೊಂದಲಕ್ಕೆ ಸಚಿವ ಸುಧಾಕರ್ ತೆರೆ

ದೇವನಹಳ್ಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವಾಗಿ ರೂಪಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಘೋಷಣೆ ಮಾಡಿದ್ದಾರೆ.

ದೇವನಹಳ್ಳಿಯಲ್ಲಿ 75ನೇ ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮುಂದಿನ ಒಂದು ತಿಂಗಳಲ್ಲಿ ದೇವನಹಳ್ಳಿ ಜಿಲ್ಲಾ ಕೇಂದ್ರದ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುತ್ತದೆ' ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಯಾವುದೆಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಆ.15: ಶಿವಮೊಗ್ಗ ಜಿಲ್ಲೆ ವಿಭಜನೆಗೊಂಡು ದಾವಣಗೆರೆ ಜಿಲ್ಲೆಯಾಗಿ ಇಂದಿಗೆ 25 ವರ್ಷ

“ದೇವನಹಳ್ಳಿ ಜಿಲ್ಲಾ ಕೇಂದ್ರದ ಬಹು ದಿನಗಳ ಬೇಡಿಕ ಇದೀಗ ಈಡೇರಿದೆ” ಎಂದು ಅವರು ಹೇಳಿದ್ದಾರೆ.

ಈ ನಡುವೆ ಜಿಲ್ಲಾ ಕೇಂದ್ರಕ್ಕಾಗಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ನಡುವೆ ವಾಗ್ವಾದಗಳು ಆರಂಭವಾಗಿರುವುದು ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್