
- ಪ್ರಬಲ ಜಾತಿಯವರಿಂದ ದಲಿತರ ಮೇಲೆ ಹಲ್ಲೆ
- 'ದಲಿತರ ಮೇಲಿನ ದಾಳಿ ಪೂರ್ವನಿಯೋಜಿತ'
ತಿಡಿಗೊಳ ಹಾಗೂ ನೀಡಿಗೊಳ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ಪ್ರಬಲ ಜಾತಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಹೋರಾಟಗಾರರು ಪ್ರತಿಭಟನಾ ಧರಣಿ ನಡಸಿದ್ದಾರೆ.
ಸಿಂಧನೂರಿನ ತಾಲೂಕು ಕಚೇರಿ ಎದುರು ಧರಣಿ ನಡೆಸಿರುವ ಹೋರಾಟಗಾರರುಮ ತಹಶೀಲ್ದಾರ್ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. "ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಪ್ರಬಲ ಜಾತಿಯವರು ದಲಿತರಿಗೆ ಬಹಿಷ್ಕಾರ ಹಾಕಲು ಕರೆ ನೀಡಿದ್ದರು. ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ನಡೆದಿವೆ. ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿದರೂ, ಪ್ರಯೋಜನವಾಗಿಲ್ಲ. ದಲಿತರ ಮೇಲಿನ ದೌರ್ಜನ್ಯ ಮುಂದುವರೆದಿವೆ" ಎಂದು ಧರಣಿನಿರತರು ಆರೋಪಿಸಿದ್ದಾರೆ.
" ಕಳೆದ ಒಂದೂವರೆ ತಿಂಗಳಿಂದ ತಿಡಿಗೋಳ ಗ್ರಾಮದ ದಲಿತರ ಮೇಲೆ ಅಲ್ಲಿನ ಪ್ರಬಲ ಜಾತಿಯವರು ದೌರ್ಜನ್ಯ ಡನೆಸುತ್ತಿದ್ದಾರೆ. ಅವರ ಮೇಲಿನ ದಬ್ಬಾಳಿಕೆಯ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಇರುವಂತೆ ಕಾಣುತ್ತಿದೆ" ಎಂದು ದಲಿತ ಮುಖಂಡ ಡಿ.ಎಚ್ ಪೂಜಾರ ಆರೋಪಿಸಿದ್ದಾರೆ.
"ದಲಿತರ ಮೇಲಿನ ಸಾಮಾಜಿಕ ಬಹಿಸ್ಕಾರದಂತಹ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಿ ಹೋಟೆಲ್, ದೇವಾಸ್ಥಾನ ಸೇರಿಂದೆ ಸಾರ್ವಜನಿಕ ಸ್ಥಳದಲ್ಲಿ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು" ಎಂದು ಒತ್ತಾಯಿಸಿದ್ದಾರೆ.
ತಿಡಿಗೋಳ ಗ್ರಾಮದ ಪ್ರಬಲ ಜಾತಿಯ ಭೂಮಾಲಿಕರು ಜಾತಿವಾದಿಗಳಾಗಿದ್ದು, ಪೂರ್ವನಿಯೋಜಿತ ಸಿದ್ಧತೆಯೊಂದಿಗೆ ದಲಿತರ ಮೇಲೆ ದಾಳಿ ಮಾಡಿದ್ದಾರೆ. ದಲಿತರು ಅನುಭವಿಸುತ್ತಿರುವ ಚಿತ್ರಹಿಂಸೆ, ನೋವು, ಕಿರುಕಳಿಗೆ ಕಡಿವಾಣ ಹಾಕಬೇಕು. ಕೇವಲ ಕಾಗದದ ಮೇಲೆ ದಲಿತರಿಗೆ ಸಮಾನತೆಯ ಭರವಸೆ ನೀಡಿದರೆ ಸಾಲದು. ಸಾಮಾಜಿಕ ನ್ಯಾಯ, ಸ್ವಾತಂತ್ರ್ಯದ ಸಮಾನತೆ, ಜಾತ್ಯಾತೀತ, ಧರ್ಮ ನಿರಾಪೇಕ್ಷ ಎಂಬ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು" ಎಂದು ಅವರು ಹೇಳಿದ್ದಾರೆ.
ಧರಣಿನಿರತರ ಹಕ್ಕೊತ್ತಾಯಗಳು
- ತಿಡಿಗೋಳ ಗ್ರಾಮದಲ್ಲಿ ಸರಕಾರಿ ಜಮೀನನ್ನು ಆಕ್ರಮವಾಗಿ ಒತ್ತುವರಿ ಮಾಡಿದ ಶ್ರೀಮಂತ ಭೂಮಾಲಿಕರನ್ನು ತೆರವುಗೊಳಿಸಿ ಸ್ಥಳೀಯ ದಲಿತರಿಗೆ ಫಾರಂ ನಂ.57 ಆರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು.
- ವಸತಿ ಹೀನರಿಗೆ ಸರ್ಕಾರದಿಂದ ಜಮೀನು ಖರೀದಿಸಿ, ಹಕ್ಕುಪತ್ರ ಕೊಟ್ಟು ನಿವೇಶನ ಕಟ್ಟಿಸಿಕೊಡಬೇಕು.
- ಮಹಿಳೆಯರಿಗೆ ಐಟೆಕ್ ಸಾರ್ವಜನಿಕ ಶೌಚಾಲಯವನ್ನು ಈ ಕೂಡಲೇ ಕಟ್ಟಿಸಿಕೊಡಬೇಕು.
- ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 150 ದಿನ ಕೆಲಸ ಕಡ್ಡಾಯವಾಗಿ ಕೊಡಬೇಕು.
ಪ್ರತಿಭಟನೆಯಲ್ಲಿ ಬಸವರಾಜ್ ಹಿರೇಮನಿ , ಶಶಿಧರ ಉಸ್ಕಿಹಾಳ , ಹುಲ್ಲೇಶ್ ಕೆಳಗೆಡಕೆರಿ , ಪರಶುರಾಮ್ ಭಂಡಾರಿ , ಪರಶುರಾಮ್ ಮಲ್ಲಾರಿ , ಬಾಲಸ್ವಾಮಿ ತಿಡಿಗೊಳ ಇನ್ನಿತರರು ಉಪಸ್ಥಿತರಿದ್ದರು.