ಧಾರವಾಡ | ಕುಂದಗೋಳ ತಹಶೀಲ್ದಾರ್‌ ಕಚೇರಿ ಬಳಿ ಕೆಸರುಗುಂಡಿಗಳದ್ದೇ ಹಾವಳಿ

  • ತಾಲೂಕು ಕಚೇರಿ ಸುತ್ತಲೂ ಗುಂಡಿಗಳದ್ದೇ ರಾಜ್ಯಭಾರ
  • ಕೊಳಚೆ ನೀರು ತುಂಬಿ ಗಬ್ಬುನಾರುವ ಗುಂಡಿಗಳು

ಸ್ವಚ್ಛತೆಯೇ ಆಧ್ಯತೆಯೆಂದು ಬೋರ್ಡು ಹಾಕಿಕೊಂಡಿರುವ ಕೆಲ ಸರ್ಕಾರಿ ಕಚೇರಿಗಳಲ್ಲಿ ಇವತ್ತು ಮೂಗು ಮುಚ್ಚಿಕೊಂಡು ಹೋಗುವ ಪರಸ್ಥಿತಿ ಬಂದೊದಗಿದೆ. ಅದಕ್ಕೆ ಧಾರವಾಡ ಜಿಲ್ಲೆಯ ಕುಂದಗೋಳ ತಹಶೀಲ್ದಾರ್ (ತಾಲೂಕು) ಕಚೇರಿ ಸಾಕ್ಷಿಯಾಗಿದೆ. 

ಕುಂದಗೋಳದ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸುತ್ತ ಮುತ್ತಲು ಕೊಳಚೆ ಗುಂಡಿಗಳು ರಾರಾಜಿಸುತ್ತಿವೆ. ಮಳೆಯಾದರೆ ಕಚೇರಿಯು ಮಳೆ ನೀರು ಮತ್ತು ಕೊಳಚೆಯ ಮಡುವಿನಲ್ಲಿ ತೇಲಾಡುವಂತೆ ಭಾಸವಾಗುತ್ತದೆ. ಹೀಗಾಗಿಯೇ ಇಲ್ಲಿನ ಸ್ಥಳೀಯರು, "ಮಳೆಗಾಲದಲ್ಲಿ ಕಚೇರಿಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಈಜುಕೊಳವೇ ನಿರ್ಮಾಣ‌ವಾಗುತ್ತದೆ" ಎಂದು ವ್ಯಂಗ್ಯವಾಡುತ್ತಾರೆ. 

ಈ ಸುದ್ದಿ ಓದಿದ್ದೀರಾ?: ಹಾವೇರಿ | ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ; ಮುಖ್ಯಮಂತ್ರಿ ತವರು ಜಿಲ್ಲೆಯ ರೈತರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಿದ್ಧತೆ

ಕೊಳಚೆ ಗುಂಡಿ ನಿರ್ಮಾಣವಾಗಿರುವ ಕಾರ್ಯಾಲಯದಲ್ಲಿ ಯಾವ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವುದಿಲ್ಲ ಎಂಬ ಸಾರ್ವಜನಿಕರು ಆರೋಪಿಸಿದ್ದಾರೆ. 

ಕುಂದಗೋಳ ತಾಲೂಕು ಆಡಳಿತ ಸ್ವಚ್ಛತೆಯ ಕಡೆ ಗಮನಹರಿಸಬೇಕು. ಕಚೇರಿಯ ಸುತ್ತಲು ತುಂಬಿ ಗಬ್ಬುನಾರುತ್ತಿರುವ ಕೆಸರು ಗುಂಡಿಯನ್ನು ಸ್ವಚ್ಚಗೊಳಿಸಬೇಕು.  ಸಾರ್ವಜನಿಕರಿಗೆ ತೊಂದರೆ ಆಗದಂತೆ ನೈರ್ಮಲ್ಯ ಕಾಪಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್