ಡಾ. ಬಿ ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ 

ambedkar
  • ಪಾದರಕ್ಷೆ ಕಳಚಿಟ್ಟು ಅಂಬೇಡ್ಕರ್‌ ಪ್ರತಿಮೆಗೆ ನಮಸ್ಕರಿಸಿದ ಪ್ರಧಾನಿ ಮೋದಿ 
  • ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯ ನೂತನ ಆವರಣ ಉದ್ಘಾಟನೆ

ಡಾ. ಬಿ ಆರ್‌ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆವರಣದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಇದೇ ವೇಳೆ ಪ್ರಧಾನಿ ಅವರು ಪಾದರಕ್ಷೆ ಕಳಚಿಟ್ಟು ಅಂಬೇಡ್ಕರ್‌ ಪ್ರತಿಮೆಗೆ ನಮಸ್ಕರಿಸಿದರು. 

ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯ ನೂತನ ಆವರಣವನ್ನು ಮೋದಿ ಉದ್ಘಾಟಿಸಿದರು. ಇದೇ ವೇಳೆ ಉನ್ನತಿಕರಿಸಿದ ಕೈಗಾರಿಗಾ ತರಬೇತಿ ಸಂಸ್ಥೆಗಳ ಲೋಕಾರ್ಪಣೆ ಕಾರ್ಯ ಪ್ರಧಾನಿ ಅವರಿಂದ ನಡೆಯಿತು.

43.35 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ವಿವಿ ಆವರಣವನ್ನು ಸುಮಾರು 201 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ಬೋಧನೆ ಮತ್ತು ಸಂಶೋಧನೆಯಲ್ಲಿ ಹೊಸ ಮಾದರಿಯನ್ನು ಸ್ಥಾಪಿಸಿ, ನೀತಿ ರಚನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಹಕಾರಿಯಾಗಲಿದೆ ಎನ್ನುವ ಆಶಯ ಹೊಂದಲಾಗಿದೆ.

Image
ambedkar

ಈ ಸುದ್ದಿ ಓದಿದ್ದೀರಾ? ನರೇಂದ್ರ ಮೋದಿ ರಾಜ್ಯ ಪ್ರವಾಸ| ಬಿಜೆಪಿ ನಾಯಕರಿಂದ ಆತ್ಮೀಯ ಸ್ವಾಗತ, ಮಿದುಳು ಸಂಶೋಧನಾ ಕೇಂದ್ರ ಉದ್ಘಾಟನೆ

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟಾ ಶ್ರೀನಿವಾಸ್‌ ಪೂಜಾರಿ, ವಿ ಸೋಮಣ್ಣ, ಸುನೀಲ್‌ ಕುಮಾರ್‌, ಶ್ರೀರಾಮುಲು, ಅಶ್ಚತ್ಥನಾರಾಯಣ  ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್