ಹುಬ್ಬಳ್ಳಿ–ಬೆಂಗಳೂರು ಮಾರ್ಗದ ನಡುವೆ ಶೀಘ್ರವೇ ಎಲೆಕ್ಟ್ರಿಕ್ ರೈಲು ಸಂಚಾರ

  • ಬೆಂಗಳೂರು–ಹುಬ್ಬಳ್ಳಿ ನಡುವೆ ದ್ವಿಪಥ ರೈಲು ಕಾಮಗಾರಿಗೆ 1,954.21 ಕೋಟಿ ರೂ.ಗಳ ಅನುದಾನ
  • 193 ಕಿ.ಮೀ ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣ

ಹುಬ್ಬಳ್ಳಿ–ಬೆಂಗಳೂರು ಮಾರ್ಗದ ನಡುವೆ ಆರಂಭವಾಗಿದ್ದ ಎರಡು ಪಥದ ರೈಲು ಕಾಮಗಾರಿ ಇದೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮುಗಿಯಲಿದೆ. ಮಾರ್ಗದ ವಿದ್ಯುತ್ ಕಾಮಗಾರಿ 2023ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮುಂದಿನ ಏಪ್ರಿಲ್ ವೇಳೆಗೆ ಎರಡೂ ಮಹಾನಗರಗಳ ಮಧ್ಯೆ ಎಲೆಕ್ಟ್ರಿಕ್ ರೈಲು ಸಂಚರಿಸುವುದು ಬಹುತೇಕ ಖಚಿತವಾಗಿದೆ.

ಹುಬ್ಬಳ್ಳಿ–ಬೆಂಗಳೂರು ನಡುವೆ ಸುಮಾರು 469 ಕಿ.ಮೀ ದೂರದ ರೈಲು ಮಾರ್ಗದಲ್ಲಿ, ಹುಬ್ಬಳ್ಳಿ–ಚಿಕ್ಕಜಾಜೂರು ನಡುವಿನ 190 ಕಿ.ಮೀ ದೂರ ರೈಲು ಮಾರ್ಗ ದ್ವಿಪಥಗೊಳ್ಳುವುದು ಬಾಕಿ ಉಳಿದಿತ್ತು. ಇದೀಗ ಉಳಿದಿದ್ದ ಈ ಮಾರ್ಗದ ಹುಬ್ಬಳ್ಳಿ ದಕ್ಷಿಣ–ಸಂಶಿ ನಡುವೆ 20 ಕಿ.ಮೀ ಹಾಗೂ ದೇವರಗುಡ್ಡ–ಹಾವೇರಿ ನಡುವೆ 25 ಕಿ.ಮೀ ಉದ್ದದ ಎರಡು ಪಥದ ರೈಲು ಕಾಮಗಾರಿ ಇದೇ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ.

ರೈಲು ಕಾಮಗಾರಿ ಪೂರ್ಣಗೊಂಡಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ನಡುವೆ ಪೂರ್ಣ 469 ಕಿಮೀ ಉದ್ದದ ರೈಲು ಮಾರ್ಗ ದ್ವಿಪಥವಾದಂತೆ ಆಗುತ್ತದೆ.

ಬೆಂಗಳೂರು–ಹುಬ್ಬಳ್ಳಿ ನಡುವೆ ರೈಲು ಮಾರ್ಗವನ್ನು ದ್ವಿಪಥಗೊಳಿಸುವ ಕಾಮಗಾರಿಗೆ ರೈಲ್ವೆ ಸಚಿವಾಲಯ 2015-16ರಲ್ಲಿಯೇ ಹಸಿರು ನಿಶಾನೆ ತೋರಿಸಿತ್ತು. ಈ ಕಾಮಗಾರಿಯ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ವಹಿಸಿಕೊಂಡಿದ್ದು 1,954.21 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿದೆ.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ನೆಹರು ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸಲು ಅಂತಿಮ ಗಡುವು: ತಪ್ಪಿದರೆ ಕಾನೂನು ಕ್ರಮ

ಚಿಕ್ಕಬಾಣಾವರ (ಬೆಂಗಳೂರು)-ಹುಬ್ಬಳ್ಳಿ ನಡುವೆ 469 ಕಿಮೀ ದೂರದ ರೈಲು ಮಾರ್ಗದ ವಿದ್ಯುತ್ ಕಾಮಗಾರಿಗೆ 850 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಇದರಲ್ಲಿ ಈಗಾಗಲೇ 193 ಕಿಮೀ ಉದ್ದದ ಮಾರ್ಗ ಎಲೆಕ್ಟ್ರಿಫಿಕೇಶನ್(ವಿದ್ಯುದ್ದೀಕರಣ) ಮುಗಿದಿದೆ. ಇನ್ನುಳಿದ ಮಾರ್ಗದ ಎಲೆಕ್ಟ್ರಿಫಿಕೇಶನ್ ಕಾಮಗಾರಿ 2023ರ ಮಾರ್ಚ್‌ನಲ್ಲಿ ಮುಗಿಯುವ ಸಾಧ್ಯತೆ ಇದೆ. ಅಂದರೆ, ಹುಬ್ಬಳ್ಳಿ–ಬೆಂಗಳೂರು ನಡೆವೆ ವಿದ್ಯುತ್ ರೈಲು ಸಂಚರಿಸುವುದು ಖಚಿತವಾಗಿದೆ ಎಂದು ತಿಳಿದು ಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app