
2025-26ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ 6 ವರ್ಷ ಪೂರೈಸಿರುವ ಮಗುವನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ವಯೋಮಿತಿಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಆದೇಶದ ಪ್ರತಿ ಈ ದಿನ.ಕಾಮ್ ಗೆ ಲಭ್ಯವಾಗಿದ್ದು, 2025-26 ಶೈಕ್ಷಣಿಕ ವರ್ಷದಿಂದ ಜೂನ್ 1ನೇ ತಾರೀಖಿಗೆ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಲು ಸರ್ಕಾರ ವಯೋಮಿತಿ ನಿಗದಿ ಪಡಿಸಿದೆ.
ಈ ಹಿಂದೆ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಲು 5 ವರ್ಷ 9 ತಿಂಗಳು ನಿಗದಿ ಪಡಿಸಲಾಗಿತ್ತು. ವಯೋಮಿತಿ ನಿಗದಿ ವಿಚಾರವಾಗಿ ಕಳೆದ ಜುಲೈ 26ರಂದು ಹೊರಡಿಸಿದ್ದ ಆದೇಶಕ್ಕೆ ತಿದ್ದುಪಡಿ ತಂದು, ಮಂಗಳವಾರ ಹೊಸ ತಿದ್ದುಪಡಿ ಆದೇಶವನ್ನು ಸರ್ಕಾರ ಹೊರಡಿಸಿದೆ.
