ಬೆಳಗಾವಿ | ಮಗಳನ್ನು ಸಲುಹಲಾಗದೇ ಕತ್ತು ಹಿಸುಕಿ ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ

  • ಅಪರಾಧಕ್ಕೆ ಕಾರಣವಾದ ಬಡತನ
  • ಶಿಕ್ಷಣವನ್ನೂ ಕೊಡಿಸಲಾಗದ ಚಿಂತೆ

ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಅಪರಾಧಿಗೆ ಬೆಳಗಾವಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ 10 ಸಾವಿರ ರೂ. ದಂಡವನ್ನೂ ವಿಧಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಂಗಸೂಳಿ ಮಲ್ಲಾರವಾಡಿ ಗ್ರಾಮದ ಬಸವರಾಜ ಈರಪ್ಪ ಮಗದುಮ್ ಎಂಬಾತ ತನ್ನ ಮಗಳನ್ನು ಸಾಕಲಾಗದೇ, ಕೊಲೆ ಮಾಡಿದ್ದ. 

ಬಸವರಾಜ ಮಗದುಮ್ ಕಿತ್ತು ತಿನ್ನುವ ಬಡತನ ಎದುರಿಸುತ್ತಿದ್ದ. ತನ್ನ ಮಗಳಿಗೆ ಪ್ರತಿದಿನ ಮೂರುಹೊತ್ತು ಆಹಾರ ನೀಡಲೂ ಮತ್ತು ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಎಂದು ಆತನ ಪರ ವಕೀಲರು ಕೋರ್ಟ್‌ನಲ್ಲಿ ವಿವರಿಸಿದ್ದರು. 

ಬಡತನದ ಕಾರಣಕ್ಕಾಗಿ ತನ್ನ ಏಳು ವರ್ಷದ ಮಗಳಾದ ಸಂಗೀತಾಳನ್ನು ಅದೇ ಗ್ರಾಮದ ಅಪ್ಪಾಸಾಬ ಸುರೇಶ ಶಿಂಧೆ ಎಂಬುವವರ ಜಮೀನಿನಲ್ಲಿರುವ ಶೆಡ್‌ನಲ್ಲಿ 2016ರ ಜೂನ್ 9 ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂಬುದು ವಿಚಾರಣೆಯಲ್ಲಿ ಸಾಬೀತಾಗಿದೆ.

ಈ ಸುದ್ದೀ ಓದಿದ್ದೀರಾ?: ಬುಡಕಟ್ಟು ಸಮುದಾಯದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಕರ್ಮಿ

ಈ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಅಥಣಿಯ ಸಿಪಿಐ ಶೇಖರಪ್ಪ ಅವರು, ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಎಲ್ ಚವ್ಹಾಣ ಅವರು ಬಸವರಾಜ ಮಗದುಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್