ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ‘ಕೈಗಾರಿಕಾ ದಸರಾ’ ಆಯೋಜನೆ; ಸೆ.26ರಂದು ಚಾಲನೆ

Mysore
  • ಸೆ.26ಕ್ಕೆ ಕೈಗಾರಿಕಾ ವಿಚಾರ ಸಂಕಿರಣ
  • ಎರಡು ದಿನಗಳ ಕಾಲ ಕೈಗಾರಿಕಾ ಪ್ರವಾಸ

ಮೈಸೂರಿನ ದಸರಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 'ಕೈಗಾರಿಕಾ ದಸರಾ' ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆಪ್ಟೆಂಬರ್ 26ರಿಂದ 30ರವರೆಗೆ ಕೈಗಾರಿಕಾ ದಸರಾ ನಡೆಯಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್,” ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ‘ಕೈಗಾರಿಕಾ ವಿಚಾರಣಾ ಸಂಕಿರಣ’ ಎಂಬ ಕಾರ್ಯಕ್ರಮವನ್ನು ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 26 ಹಾಗೂ 27ರಂದು ವಿಚಾರ ಸಂಕಿರಣ ನಡೆಯಲಿದೆ” ಎಂದರು.

“ಸ್ವಯಂ ಉದ್ಯೋಗ ನಿರ್ವಹಿಸುತ್ತಿರುವ ಉದ್ಯಮಿದಾರರು ಹಾಗು ಸ್ವಯಂ ಉದ್ಯೋಗ ನಡೆಸಲು ಆಸಕ್ತರಾಗಿರುವವ ಅನುಕೂಲವಾಗುವಂತೆ ವಿಚಾರಣ ಸಂಕಿರಣವನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಸರ್ಕಾರದಿಂದ ವತಿಯಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಸ್ವಯಂ ಉದ್ಯೋಗಿಗಳಿಗೆ ಮಾಹಿತಿ ನೀಡಲಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ?: ಮೈಸೂರು | ಜಂಬೂ ಸವಾರಿ ಮೆರವಣಿಗೆಯ ಮೆರಗು ಹೆಚ್ಚಿಸಲಿವೆ 43 ಸ್ತಬ್ದಚಿತ್ರಗಳು

“ಸೆಪ್ಟೆಂಬರ್ 28ರಂದು ‘ವೆಂಡರ್ ಡೆವಲಪ್ಮೆಂಟ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಏರ್ಪಡಿಸಲಾಗಿದೆ. ಕೇಂದ್ರ, ರಾಜ್ಯ ಖಾಸಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಇದರಲ್ಲಿ ಭಾಗವಹಿಸಲಿವೆ” ಎಂದರು.

“ಸೆಪ್ಟೆಂಬರ್ 29 ಹಾಗೂ 30ರಂದು ‘ಕೈಗಾರಿಕಾ ಪ್ರವಾಸ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉದ್ದಿಮೆದಾರರಿಗೆ, ವಿದ್ಯಾರ್ಥಿಗಳಿಗೆಂದೇ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ” ಎಂದರು.

“ಕಾರ್ಯಕ್ರಮದಲ್ಲಿ ಸುಮಾರು 25 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯಮಿಗಳು ಭಾಗವಹಿಸಲಿದ್ದಾರೆ. ಮಹಿಳಾ ನಿರುದ್ಯೋಗಿಗಳಿಗೆ ಅನುಕೂಲವಾಗುವಂತೆ ಕಾರ್ಯಕ್ರಮವನ್ನು ನಿರೂಪಿಸಲಾಗಿದೆ. ಸ್ವಯಂ ಉದ್ಯೋಗ ಪ್ರಾರಂಭಿಸಲು ಇಚ್ಛಿಸುವವರು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9916250557 ಗೆ ಸಂಪರ್ಕಿಸಬಹುದು” ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್