ಆ 12: ಸಿಇಟಿ-ನೀಟ್ ಬರೆದ ವಿದ್ಯಾರ್ಥಿಗಳಿಗೆ ಈ ದಿನ.ಕಾಮ್‌ನಲ್ಲಿ ಉಚಿತ ಕೌನ್ಸೆಲಿಂಗ್

  • ಆಗಸ್ಟ್ 12ರಂದು ವೃತ್ತಿಪರ ಕೋರ್ಸ್‌ಗಳ ಬಗ್ಗೆ ಈದಿನ.ಕಾಮ್‌ನಲ್ಲಿ ಸಂಪೂರ್ಣ ಮಾಹಿತಿ
  • ಅತ್ಯುತ್ತಮ ಕೋರ್ಸ್ ಆಯ್ಕೆ ಹೇಗೆ ಎಂಬ ನಿಮ್ಮ ಗೊಂದಲಗಳಿಗೆ ಸಿಗಲಿದೆ ಉತ್ತರ

2022ನೇ ಸಾಲಿನಲ್ಲಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬರೆದ ವಿದ್ಯಾರ್ಥಿಗಳಿಗೆ ಈ ದಿನ.ಕಾಮ್ ಡಿಜಿಟಲ್ ಮಾಧ್ಯಮದಲ್ಲಿ ಉಚಿತ ಕೌನ್ಸೆಲಿಂಗ್ ನೀಡಲಾಗುತ್ತಿದೆ. 

ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಕೃಷಿ ವಿಜ್ಞಾನ, ಫಾರ್ಮಸಿ ಹಾಗೂ ಎಂಜಿನಿಯರಿಂಗ್ ವಿಷಯಗಳಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಲು ಭಯಸುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾರ್ಗದರ್ಶನ ನೀಡಲು ಈದಿನ.ಕಾಮ್ ಉದ್ದೇಶಿಸಿದೆ. ಆಗಸ್ಟ್ 12ರ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಲೈವ್ ಮೂಲಕ ಕೌನ್ಸೆಲಿಂಗ್ ನೀಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ದಿಕ್ಸೂಚಿ | ಪಿಯುಸಿ ವಾಣಿಜ್ಯ ವಿಭಾಗದ ನಂತರ ಮುಂದೇನು? - ಭಾಗ 2

ಅತ್ಯುತ್ತಮ ಕೋರ್ಸ್‌ನ ಆಯ್ಕೆ ಹೇಗೆ?, ಸಿಇಟಿ ಅಥವಾ ನೀಟ್ ಬಗ್ಗೆ ಆನ್‌ಲೈನ್ ಕೌನ್ಸೆಲಿಂಗ್‌ನ ಹಂತಗಳು, ಅಗತ್ಯವಿರುವ ದಾಖಲೆಗಳು, ದಾಖಲಾತಿ ಪರಿಶೀಲನೆ, ಆಯ್ಕೆಯ ಪ್ರವೇಶ (ಆಪ್ಶನ್ ಎಂಟ್ರಿ) ಅಥವಾ ಚಾಯ್ಸ್ ಎಂಟ್ರಿ ವಿಧಾನಗಳು, ಕಾಲೇಜು ಮತ್ತು ಕೋರ್ಸ್‌ಗಳ 'ಕಟ್‌ಆಫ್' ನೋಡುವುದು ಹೇಗೆ? ಪಿಯುಸಿ (ವಿಜ್ಞಾನ) ನಂತರ ಲಭ್ಯವಿರುವ ಕೋರ್ಸ್‌ಗಳ ಬಗ್ಗೆ ತಿಳಿಸಲಾಗುತ್ತದೆ.

ಈ ಎಲ್ಲ ವಿಚಾರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಗೊಂದಲಗಳಿದ್ದರೆ, ಫೇಸ್ಬುಕ್‌ನಲ್ಲಿ ಕಮೆಂಟ್ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳಬಹುದು. ಉತ್ತರ ಪಡೆದುಕೊಳ್ಳಬಹುದು. 

ಮಂಗಳೂರಿನ ಕೆರಿಯರ್ ಕೌನ್ಸಿಲರ್ ಉಮರ್ ಯು ಹೆಚ್ ಅವರು ಲೈವ್‌ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತರು facebook.com/eedinanews ಅಥವಾ youtube.com/c/eedinanews ಲಿಂಕ್‌ಗಳ ಮೂಲಕ ಭಾಗವಹಿಸಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್