ಸ್ವಾತಂತ್ರ್ಯ ಅಮೃತ ಮಹೋತ್ಸವ| ರಾಜ್ಯದ 18 ಮಂದಿ ಪೊಲೀಸರಿಗೆ ಅತ್ಯುತ್ತಮ ಸೇವಾ ಪದಕ ಘೋಷಣೆ

 • ಕರ್ನಾಟಕದ 18 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ
 • 1,082 ಪೊಲೀಸರರಿಗೆ ಪ್ರತಿಷ್ಠಿತ ಶೌರ್ಯ ಪದಕ ಗೌರವ

ಗೃಹರಕ್ಷಣೆ ಹಾಗೂ ನಾಗರಿಕ ರಕ್ಷಣೆ ವಿಭಾಗದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದವರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ಅತ್ಯುತ್ತಮ ಸೇವಾ ಪದಕ‌ ಗೌರವಕ್ಕೆ ಕರ್ನಾಟಕ ರಾಜ್ಯದ ಇಬ್ಬರು ಸೇರಿದಂತೆ 37 ಮಂದಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ, ಜಮ್ಮು– ಕಾಶ್ಮೀರ ಹಾಗೂ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದವರು ಸೇರಿದಂತೆ ಒಟ್ಟು 1,082 ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಶೌರ್ಯ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಜೈಲುಗಳ ಸುಧಾರಣೆಗಾಗಿ ಕ್ರಮ ಕೈಗೊಂಡವರಿಗೆ ನೀಡುವ ಅತ್ಯುನ್ನತ ಸೇವಾ ಪದಕಕ್ಕೆ ಕರ್ನಾಟಕದ ನಾಲ್ವರು ಜೈಲು ಅಧಿಕಾರಿಗಳು ಸೇರಿದಂತೆ 38 ಮಂದಿ ಆಯ್ಕೆಯಾಗಿದ್ದಾರೆ.

ಪೊಲೀಸರಿಗೆ ನೀಡುವ ಶೌರ್ಯ ಪದಕಕ್ಕೆ ಒಟ್ಟು 347 ಪೊಲೀಸರು, ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ 87 ಹಾಗೂ ಅತ್ಯುನ್ನತ ಸೇವೆಗಾಗಿ ನೀಡುವ ಪದಕಕ್ಕಾಗಿ 648 ಪೊಲೀಸರು ಆಯ್ಕೆಯಾಗಿದ್ದಾರೆ. ಅತ್ಯುನ್ನತ ಸೇವಾ ಪದಕಕ್ಕೆ ಕರ್ನಾಟಕದ 18 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.

ಶೌರ್ಯ ಪದಕಕ್ಕೆ 109 ಸಿಆರ್ಪಿಎಫ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಸಿಬಿಐನ ಆರು ಮಂದಿ ಅಧಿಕಾರಿಗಳು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ 24 ಸಿಬ್ಬಂದಿ ಅತ್ಯುನ್ನತ ಪೊಲೀಸ್ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

18 ಪೊಲೀಸರಿಗೆ ರಾಷ್ಟ್ರಪತಿ ಪದಕ

ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನೀಡುವಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸರ ಗಣನೀಯ ಸೇವೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ಪದಕ ಲಭಿಸಿದೆ. 2022ನೇ ಸಾಲಿನ ರಾಷ್ಟ್ರಪತಿ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

 • ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್‌ಪಿಬಿ, ಬೆಂಗಳೂರು
 • ಎಸ್ ಮೊಹಮ್ಮದ್ ಅಲಿ, ಇನ್‌ಸ್ಪೆಕ್ಟರ್‌, ಎಸಿಬಿ, ಬೆಂಗಳೂರು
 • ಮುಫೀದ್ ಖಾನ್, ಆರ್‌ಪಿಐ, ಕೆಎಸ್ಆರ್‌ಪಿ 4ನೇ ಪಡೆ, ಬೆಂಗಳೂರು
 • ಮಹದೇವಯ್ಯ, ಸಹಾಯಕ ಆರ್‌ಎಸ್‌ಐ, ಕೆಎಸ್ಆರ್‌ಪಿ 4ನೇ ಪಡೆ, ಬೆಂಗಳೂರು
 • ಮುರುಳಿ, ಸಹಾಯಕ ಆರ್‌ಎಸ್‌ಐ, ಕೆಎಸ್ಆರ್‌ಪಿ 3ನೇ ಪಡೆ, ಬೆಂಗಳೂರು
 • ರಂಜಿತ್ ಶೆಟ್ಟಿ, ಎಎಸ್ಐ, ಕೆಂಪೇಗೌಡ ನಗರ, ಬೆಂಗಳೂರು
 • ಬಸವರಾಜ ಅಂಡೆಮ್ಮನವರ, ಸಹಾಯಕ ಗುಪ್ತದಳ ಅಧಿಕಾರಿ, ಬೆಂಗಳೂರು
 • ಪ್ರತಾಪ್ ಸಿಂಗ್ ತೋರಟ್, ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬಂಟ್ವಾಳ
 • ಟಿ ಎಂ ಶಿವಕುಮಾರ್, ಡಿವೈಎಸ್ಪಿ, ಹೈಕೋರ್ಟ್ ಭದ್ರತೆ
 • ಜೆ ಎಚ್ ಇನಾಂದಾರ್, ಡಿವೈಎಸ್ಪಿ, ಡಿಸಿಆರ್‌ಬಿ, ಕಲಬುರಗಿ
 • ಎನ್ ಟಿ ಶ್ರೀನಿವಾಸ್ ರೆಡ್ಡಿ, ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ
 • ಎನ್ ಶ್ರೀನಿವಾಸ್, ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಕಡೂರು
 • ಪಿ. ನರಸಿಂಹಮೂರ್ತಿ, ಡಿವೈಎಸ್ಪಿ, ಸಿಐಡಿ
 • ಆರ್ ಪ್ರಕಾಶ್, ಡಿವೈಎಸ್ಪಿ, ಎಸಿಬಿ
 • ಧೃವರಾಜ್ ಬಿ ಪಾಟೀಲ, ಸಿಪಿಐ, ನವಲಗುಂದ, ಧಾರವಾಡ
 • ಜಿ ಸಿ ರಾಜ, ಇನ್‌ಸ್ಪೆಕ್ಟರ್, ವಿದ್ಯಾರಣ್ಯಪುರ, ಮೈಸೂರು
 • ಬಿ ಎಸ್ ರವಿ, ಇನ್‌ಸ್ಪೆಕ್ಟರ್‌, ಶೃಂಗೇರಿ, ಚಿಕ್ಕಮಗಳೂರು
 • ಬಾಲಕೃಷ್ಣ ಶಿಂಧೆ, ಎಎಸ್ಐ, ಡಿಎಸ್‌ಬಿ, ಬೆಳಗಾವಿ
ನಿಮಗೆ ಏನು ಅನ್ನಿಸ್ತು?
0 ವೋಟ್