ಮೂಲಭೂತ ಹಕ್ಕನ್ನು ಉಲ್ಲಂಘಿಸದಂತೆ ನ್ಯಾಯ ದೊರಕಿಸುವುದೇ ಸ್ವಾತಂತ್ರ್ಯ: ನ್ಯಾಯಮೂರ್ತಿ ವಿಜಯಕುಮಾರ್

ಭೂಮಿಯ ಗಡಿ ಗುರುತಿಸುವುದು ಸ್ವಾತಂತ್ರ್ಯ ಆಗುವುದಿಲ್ಲ. ಮೂಲಭೂತ ಹಕ್ಕು ಮತ್ತು ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನ್ಯಾಯ ದೊರಕಿಸುವುದು ಸ್ವಾತಂತ್ರ್ಯ ಎಂದು ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್ ವಿಜಯಕುಮಾರ್ ಹೇಳಿದರು.

ಕಾರಾವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ಭೂಮಿಯ ಗಡಿಯನ್ನು ಗುರುತಿಸುವುದು ಸ್ವಾತಂತ್ರ್ಯ ಆಗುವುದಿಲ್ಲ. ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಮತ್ತು ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನ್ಯಾಯ ದೊರಕಿಸಿ ಕೊಡುವುದೇ ಸ್ವಾತಂತ್ರ್ಯ” ಎಂದು ಅವರು ತಿಳಿಸಿದರು.

ಈ ವೇಳೆ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಶಿವಾಜಿ ಅನಂತ್‌ ನಾಲವಡೆ ಹಾಗೂ ಇತರರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಹರ್‌ ಘರ್‌ ತಿರಂಗಾ ಅಭಿಯಾನದ ಕುರಿತು ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ದೇವನಹಳ್ಳಿ: ಸಚಿವ ಸುಧಾಕರ್

ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲರು ಜಿಲ್ಲಾ ಸರ್ಕಾರಿ ವಕೀಲರು, ಅಭಿಯೋಜನಾ ಇಲಾಖೆಯ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು, ವಿವಿಯ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್