
- ಲಕ್ಷ್ಮೇಶ್ವರ ಪೊಲೀಸರಿಂದ ಬಿಟ್ ಕಾರ್ಯಕ್ರಮ ಆಯೋಜನೆ
- ಗ್ರಾಮದಲ್ಲಿರುವ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ
ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಇದ್ದಾರೆ. ಹಾಗಾಗಿ ಅವರನ್ನು ನೋಡಿ ಜನರು ಭಯ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿದರೆ ಪ್ರತಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಬಹುದು ಎಂದು ಲಕ್ಷ್ಮೇಶ್ವರ ಠಾಣೆಯ ಕ್ರೈಂ ಬ್ರಾಂಚ್ನ ಅಧಿಕಾರಿಗಳಾದ ವ್ಹಿ. ಜಿ ಪವಾರ್ ಹೇಳಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಲಕ್ಷ್ಮೇಶ್ವರ ಪೊಲೀಸರು ‘ಬಿಟ್ ಕಾರ್ಯಕ್ರಮ’ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಪವಾರ್ ಮಾತನಾಡಿದರು.
“ಜನರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹೆಲ್ಮೆಟ್ ಬಳಸಬೇಕು. ಅಪಘಾತ ಸಂಭವಿಸಿದಾಗ ನಿಮ್ಮ ಪ್ರಾಣ ಉಳಿಯುತ್ತದೆ. ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡುವಾಗ ನಮ್ಮನ್ನು ನಂಬಿರುವ ನಿಮ್ಮ ಕುಟುಂಬ ನೆನಪಿನಲ್ಲಿರಲಿ" ಎಂದರು.
ಈ ಸುದ್ದಿ ಓದಿದ್ದೀರಾ? : ಗದಗ | ಸಾರಿಗೆ ಸಂಸ್ಥೆಯ ಬಸ್ ಪಲ್ಟಿ : 20ಕ್ಕೂ ಹೆಚ್ಚು ಜನರಿಗೆ ಗಾಯ
“ದೊಡ್ಡೂರು ಗ್ರಾಮಕ್ಕೆ ಬಿಟ್ ಪೋಲಿಸ್ ಅಧಿಕಾರಿಯಾಗಿ ಸೋಮನಾಥ ವಾಲ್ಮೀಕಿ ಇರುತ್ತಾರೆ. ಅವರೇ ದೊಡ್ಡೂರು ಗ್ರಾಮಕ್ಕೆ ಸಬ್ ಇನ್ಸ್ಪೆಕ್ಟರ್ ಇದ್ದ ಹಾಗೇ, ಊರಿನಲ್ಲಿ ಯಾವುದಾದರೂ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದರೆ, ಅವರ ಗಮನಕ್ಕೆ ತನ್ನಿ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಪಾಟೀಲ್, ದೊಡ್ಡೂರ ಗ್ರಾಮದ ಬಿಟ್ ಪೋಲಿಸ್ ಅಧಿಕಾರಿ ಸೋಮನಾಥ ವಾಲ್ಮೀಕಿ, ಗ್ರಾಮದ ಹಿರಿಯರಾದ ಅಮರಪ್ಪ ಗುಡಗುಂಟಿ, ಎನ್, ಎಚ್, ಹಡಪದ, ಗಣೇಶ ಲಮಾಣಿ, ಮಲ್ಲೇಶ ಮಣ್ಣಮ್ಮ, ನಿಂಗಪ್ಪ, ಮಕರಬ್ಬಿ, ಕೃಷ್ಣ ಮಣ್ಣಮ್ಮ ಸೇರಿದಂತೆ ಗ್ರಾಮದ ಹಲವು ಯುವಕರು ಕೂಡ ಹಾಜರಿದ್ದರು.