ಕೊಡಗು | ಬಾಡಿಗೆ ಮನೆ ಕೊಡಲು ನಿರಾಕರಣೆ; ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಲಿಂಗತ್ವ 'ಟ್ರಾನ್ಸ್‌ಜೆಂಡರ್'

kodagu
  • ದಯಾಮರಣಕ್ಕೆ ಕೋರಿ ನಾಲ್ಕು ಬಾರಿ ಅರ್ಜಿ ಸಲ್ಲಿಕೆ
  • ಲಿಂಗತ್ವ ಅಲ್ಪಸಂಖ್ಯಾತೆ ಕಷ್ಟಕ್ಕೆ ಸ್ಪಂದಿಸದ ಜಿಲ್ಲಾಧಿಕಾರಿ

ಬಾಡಿಗೆ ಮನೆ ಪಡೆಯಲು ಸಾಧ್ಯವಾಗದೆ ಮನನೊಂದು ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ದಯಾ ಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.

“ಲಿಂಗತ್ವ ಅಲ್ಪಸಂಖ್ಯಾತರಾಗಿರುವುದರಿಂದ ನನಗೆ ಜಿಲ್ಲೆಯಲ್ಲಿ ಯಾರೂ ಬಾಡಿಗೆಗೆ ಮನೆ ಕೊಡುತ್ತಿಲ್ಲ. ಈ ವಿಷಯವಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ. ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರಿಗೂ ನಾವು ಬೇಡವಾಗಿದ್ದೇವೆ” ಎಂದು ರಿಹಾನಾ ಎಂಬವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ| ಮಸೂದ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

“ಒಂದೆರಡು ಸಲವಲ್ಲ ಸತತ ನಾಲ್ಕು ಬಾರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ. ಲಿಂಗತ್ವ ಅಲ್ಪಸಂಖ್ಯಾತರಾಗಿ ಹುಟ್ಟಿದ್ದು ನನ್ನ ತಪ್ಪಾ? ನನಗೆ ಬದುಕುವ ಹಕ್ಕು ಇಲ್ಲವೇ ? ಜನರು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆಯೇ? ನಾವು ಭಾರತೀಯ ಪ್ರಜೆಗಳಲ್ಲವೇ?” ಎಂದು ರಿಹಾನ ಕೇಳಿದ್ದಾರೆ.

"ನಾನು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನಮಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡುತ್ತಿಲ್ಲ. ಜಿಲ್ಲಾಧಿಕಾರಿ ಕೂಡ ನಮಗೆ ಸಹಾಯ ಮಾಡಲು ವಿಫಲರಾಗಿದ್ದಾರೆ. ನನಗೆ ಉಚಿತ ಮನೆ ಬೇಕು ಎಂದು ಕೇಳುತ್ತಿಲ್ಲ. ನಾನು ಬಾಡಿಗೆ ನೀಡಲು ಶಕ್ತಳಾಗಿದ್ದೇನೆ" ಎಂದು ರಿಹಾನಾ ತಿಳಿಸಿದ್ದಾರೆ.

ಫೋಟೋ: ಸಾಂದರ್ಭಿಕ ಚಿತ್ರ
ನಿಮಗೆ ಏನು ಅನ್ನಿಸ್ತು?
0 ವೋಟ್