ಇದು ನಮ್ಮ ಸೌಹಾರ್ದ | ಹಿಂದೂ-ಮುಸ್ಲಿಮರ ಸಾಮರಸ್ಯ ತಾಣ ಶಿವಮೊಗ್ಗದ ಹಣಗೆರೆಕಟ್ಟೆ

ಬಾಗ್ದಾದ್ ಸೂಫಿ ಮನೆತನದ 'ಹಜರತ್ ಸೈಯದ್ ಸಾದತ್' ಅವರು ಧ್ಯಾನದಲ್ಲಿದ್ದರು. ಆಗ ಬೂತಪ್ಪ ಮತ್ತು ಚೌಡಮ್ಮ ಎಂಬ ಅಣ್ಣ-ತಂಗಿಯರು ಅವರಿಗೆ ಹಾಲುಹಣ್ಣನ್ನು ನೀಡುತ್ತಿದ್ದರು.

ಶಿವಮೊಗ್ಗದಿಂದ 37 ಕಿ.ಮೀ ದೂರದಲ್ಲಿರುವ ಹಣಗೆರೆಕಟ್ಟೆ ಎಂಬ ಗ್ರಾಮ ಸೌಹಾರ್ದತೆಯ ನೆಲೆಯಾಗಿದೆ. ಇಲ್ಲಿ ದರ್ಗಾ ಹಾಗೂ ದೇವಾಲಯವು ಒಂದೇ ಸೂರಿನಲ್ಲಿವೆ.

ಗ್ರಾಮವು ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದಲ್ಲಿದೆ. ಹಳ್ಳಿಯಲ್ಲಿರುವ ಹಜರತ್ ಸಯೀದ್ ಸದಾತ್ ದರ್ಗಾ ಮತ್ತು ದೇವಲಯ ಸುಮಾರು 500 ವರ್ಷಕ್ಕೂ ಹಳೆಯ ಇತಿಹಾಸ ಹೊಂದಿದೆ ಎಂದು ಹಳ್ಳಿಗರು ಹೇಳುತ್ತಾರೆ. 

ಹಳ್ಳಿಯ ಜನರು ಹೇಳುವಂತೆ ಹಣಗೆರೆಕಟ್ಟೆಯ ಕೆರೆಯ ದಡದ ಮೇಲೆ ಬಾಗ್ದಾದ್ ಸೂಫಿ ಮನೆತನದ 'ಹಜರತ್ ಸೈಯದ್ ಸಾದತ್' ಅವರು ಧ್ಯಾನದಲ್ಲಿದ್ದರು. ಆಗ ಬೂತಪ್ಪ ಮತ್ತು ಚೌಡಮ್ಮ ಎಂಬ ಅಣ್ಣ-ತಂಗಿಯರು ಅವರಿಗೆ ಹಾಲುಹಣ್ಣನ್ನು ನೀಡುತ್ತಿದ್ದರು. ಸಾದತ್ ಅವರು ಲೋಕ ಕಲ್ಯಾಣಕ್ಕಾಗಿ ಜೀವಂತ ಸಮಾಧಿಯಾಗುವ ಮುನ್ನ ಇವರಿಬ್ಬರನ್ನು ತಮ್ಮೊಂದಿಗೆ ನೆಲೆಸಲು ಕೋರಿದ್ದರು. ಅವರ ಕೋರಿಕೆಯಂತೆ ಆ ಅಣ್ಣ-ತಂಗಿ ಅಲ್ಲಿಯೇ ನೆಲೆಸಿದರು ಎಂಬುದು ನಂಬಿಕೆ. ಹೀಗಾಗಿ, ದರ್ಗಾ ಮತ್ತು ಮಸೀದಿ ಒಂದೇ ಸೂರಿನಡಿಯಿದ್ದು, ಸಾಮರಸ್ಯದ ನೆಲೆಯಾಗಿದೆ.

ದರ್ಗಾದ ಒಳಗೆ ಹೋಗುವಾಗ ಎಡಬಲಗಳಲ್ಲಿ ಭೂತರಾಯ ಮತ್ತು ಚೌಡೇಶ್ವರಿ ದೇವರ ತ್ರಿಶೂಲಗಳಿವೆ. ಹತ್ತು ಹೆಜ್ಜೆ ಮುಂದೆ ಸಾಗಿದರೆ, ಹಜರತ್ ಸೈಯದ್ ಸಾದತ್ ಅವರ ಸಮಾಧಿ (ಗ್ರಾಮಸ್ಥರು ಜೀವಂತ ಸಮಾಧಿ ಎಂದೇ ಕರೆಯುತ್ತಾರೆ) ಇದೆ. ಪಕ್ಕದಲ್ಲಿರುವ ಮಟ್ಟಿಯ ಮರಕ್ಕೆ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಬೀಗವನ್ನು ಹಾಕಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಬಂದು ತಮ್ಮ ಇಷ್ಟಾರ್ಥ ತೋಡಿಕೊಳ್ಳುವುದರಿಂದ ಎಲ್ಲಾ ಕನಸುಗಳು ನಿಜವಾಗುತ್ತವೆ ಎನ್ನುವುದು ಜನರ ನಂಬಿಕೆ.

AV Eye Hospital ad

ಪ್ರತಿನಿತ್ಯವೂ ಕೂಡ ಎರಡೂ ಸಮುದಾಯಗಳ ಜನರು ಬಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಬೂತರಾಯ ಮತ್ತು ಚೌಡೇಶ್ವರಿಗೆ ಹೂವು, ಹಣ್ಣು-ಕಾಯಿಯನ್ನು ಅರ್ಪಿಸಿದರೆ, ದರ್ಗಾಕ್ಕೆ ಹೂವು, ಕಲ್ಲುಸಕ್ಕರೆ, ಉತ್ತುತೆ/ಖರ್ಜೂರ, ಹಸಿರು ವಸ್ತ್ರವನ್ನು ಆರ್ಪಿಸುತ್ತಾರೆ.

ಇಲ್ಲಿನ ಹಿಂದು ದೇವರುಗಳಿಗೆ ಯಾವುದೇ ಅರ್ಚಕರಿಲ್ಲ. ಬದಲಿಗೆ ಜನರೇ ಅವರ ಇಚ್ಛೆಯಂತೆ ಪೂಜೆ ಮಾಡುತ್ತಾರೆ. 

ಹಿಂದು-ಮುಸ್ಲಿಂ ಧರ್ಮಿಯರು ಇಲ್ಲಿ ಹಣ್ಣುಕಾಯಿ, ಚಹಾ, ಉಪಹಾರ ಅಂಗಡಿಗಳನ್ನು ನಡೆಸುತ್ತಿದ್ದು, ಸೌಹಾರ್ದತೆಯಿಂದ ವ್ಯಾಪಾರ ನಡೆಸುತ್ತಿದ್ದಾರೆ. ಹಿಂದುಗಳು ಮುಸ್ಲಿಮರ ಬಳಿಯೂ,. ಮುಸ್ಲಿಮರು ಹಿಂದುಗಳ ಬಳಿಯೂ ತಮಗಿಷ್ಟದ ವಸ್ತುಗಳನ್ನು, ತಿನಿಸುಗಳನ್ನು ಖರೀದಿಸುತ್ತಾರೆ. 

Hanagere Thirthahalli, Shivamoga |ಹಣಗೆರೆ ತೀರ್ಥಹಳ್ಳಿ ಶಿವಮೊಗ್ಗ - YouTube

ದರ್ಗಾ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಇತ್ತೀಚಿನ ಬೆಳವಣಿಗೆಯಲ್ಲಿ ಪ್ರಾಣಿಬಲಿ ಮತ್ತು ದೇವಾಲಯದ ಸುತ್ತಮಉತ್ತಲಿನ ಪ್ರದೇಶದಲ್ಲಿ ಆಹಾರ-ಖಾದ್ಯ ತಯಾರಿಸಿ ಊಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಸರ್ಕಾರದ ನಿರ್ಬಂಧಕ್ಕೆ ಸೆಡ್ಡುಹೊಡೆದಿರುವ ಜನರು, ತಮ್ಮ ಮನೆಗಳಲ್ಲಿಯೇ ವ್ಯಾಪಾರ ಮಳಿಗೆಗಳನ್ನು ಆರಂಭಿಸಿದ್ದಾರೆ. ಆಹಾರ ತಯಾರಿಕೆಗೆ ಬೇಕಾದ ಗ್ಯಾಸ್ ಸಿಲಿಂಡರ್, ಪಾತ್ರೆಗಳು, ಜಾಗ, ಕೊಠಡಿ ಮತ್ತು ಇತರೆ ಅಡಿಗೆ ಸಲಕರಣೆ ಎಲ್ಲವನ್ನು ಬಾಗಿಗೆಗೆ ನೀಡುತ್ತಿದ್ದಾರೆಂದು ಸ್ಥಳೀಯರು ಹೇಳುತ್ತಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app