ಒಂದು ನಿಮಿಷದ ಓದು | ದೀರ್ಘಾಯುಷಿ ಹುಲಿ ಖ್ಯಾತಿಯ ‘ಹನುಮ’ ಅನಾರೋಗ್ಯದಿಂದ ಸಾವು

Shivamogga

ದೀರ್ಘಾಯುಷಿ ಎಂದೇ ಹೆಸರು ವಾಸಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ( ಲಯನ್‌ ಎಂಡ್‌ ಟೈಗರ್ ಸಫಾರಿ) ಹುಲಿ ‘ಹನುಮ’ ಗುರುವಾರ(ಸೆಪ್ಟೆಂಬರ್ 22) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಸುಮಾರು 20 ವರ್ಷದಿಂದ ಹಿಂದೆ ಹನುಮ ಜನ್ಮತಾಳಿದ್ದು, ದೀರ್ಘಕಾಲ ಬದುಕಿದ ಹುಲಿ ಎಂಬ ದಾಖಲೆಯನ್ನು ಬರೆದಿತ್ತು. ಹನುಮನಿಗೆ ವಾಲಿ ಮತ್ತು ರಾಮ ಎಂಬ ಸಹೋದರರಿದ್ದು, ಆ ಎರಡು ಹುಲಿಗಳು ಸುಮಾರು 18 ವರ್ಷಗಳ ಕಾಲ ಬದುಕಿ, ಎರಡು ವರ್ಷಗಳ ಹಿಂದೆ ಸಾವನ್ನಪ್ಪಿವೆ.

ಹನುಮನನ್ನು ನೋಡಲು ರಾಜ್ಯದ ಎಲ್ಲ ಭಾಗಗಳಿಂದ ಜನರು ಬರುತ್ತಿದ್ದರು. ತನ್ನ ಹಾವ-ಭಾವಗಳಿಂದ ಹನುಮನು ಎಲ್ಲರಿಗೂ ಇಷ್ಟವಾಗುತ್ತಿದ್ದನು. ಹನುಮನ ಸಾವಿನ ನಂತರ ಲಯನ್‌ ಎಂಡ್‌ ಟೈಗರ್‍ ಸಫಾರಿಯಲ್ಲಿ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕೇವಲ ಎರಡೂವರೆ ವರ್ಷದಲ್ಲಿಯೇ ಲಯನ್‌ ಸಫಾರಿಯಲ್ಲಿ ನಾಲ್ಕು ಹುಲಿಗಳು ಸಾವನ್ನಪ್ಪಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್