ಹರ್ ಘರ್ ತ್ರಿರಂಗಾ | ಮನೆ ಅಡಿಪಾಯದ ಮೇಲೆ ಧ್ವಜ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಮಳೆ ಸಂತ್ರಸ್ತರು

chikkamagaluru
  • ನಾಲ್ಕು ವರ್ಷದ ಹಿಂದೆ ಅತಿವೃಷ್ಟಿಗೆ ಮನೆ ಹಾನಿ
  • "ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡದ ಸರ್ಕಾರ"

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಸರ್ಕಾರ ಹರ್ ಘರ್ ತ್ರಿರಂಗಾ ಅಭಿಯಾನ ಆರಂಭಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಅತಿವೃಷ್ಟಿಗೆ ಮನೆ ಹಾನಿಯಾಗಿದ್ದು, ಮನೆ ನಿರ್ಮಿಸಿಕೊಡಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ದ ಮನೆಯ ಅಡಿಪಾಯದ ಮೇಲೆ ಧ್ವಜ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾಲ್ಕು ವರ್ಷಗಳ ಹಿಂದೆ ಅತಿವೃಷ್ಟಿಗೆ ಚೆನ್ನಡ್ಲು ಗ್ರಾಮದ 16 ಮನೆಗಳು ಹಾನಿಯಾಗಿದ್ದವು. ಸಂತ್ರಸ್ತರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಅಡಿಪಾಯ ಹಾಕಲಾಗಿದ್ದು, ಕಟ್ಟಡ ಕೆಲಸಕ್ಕೆ ಹಣ ಬಿಡುಗಡೆ ಮಾಡುವುದನ್ನೇ ಸರ್ಕಾರ ನಿಲ್ಲಿಸಿದೆ" ಎಂದು ಆರೋಪಿಸಿ ಸಂತ್ರಸ್ತರು ಅಡಿಪಾಯದ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ; ಮನೆ ಮನೆ ಮೇಲೂ ಹಾರುತ್ತಿರುವ ತ್ರಿವರ್ಣ ಧ್ವಜಗಳು

“ನಾಲ್ಕು ವರ್ಷ ಕಳೆದರೂ ಬಾಕಿ ಹಣ ಬಿಡುಗಡೆ ಮಾಡದೇ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ನಿವೇಶನವನ್ನು ಹಂಚಿಕೆ ಮಾಡಿದ್ದಾರೆ. ಆದರೆ, ಹಕ್ಕುಪತ್ರ ನೀಡಿಲ್ಲ. ಬಾಕಿ ಅನುದಾನ ಬಿಡುಗಡೆ ಮಾಡಬೇಕಾದರೆ ಹಕ್ಕುಪತ್ರಬೇಕೆಂದು ಗ್ರಾಮ ಪಂಚಾಯತ್‌ ಅಧಿಕಾರಿಗಳು ಹೇಳುತ್ತಿದ್ದಾರೆ" ಎಂದು ಸಂತ್ರಸ್ಥ ಕುಟುಂಬಗಳು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ಮಾಡಿದ್ದೇವೆ. ಹಕ್ಕುಪತ್ರ ನೀಡುತ್ತೇವೆಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟಿದ್ದೇವೆ. ಈಗ ಮತ್ತೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಧ್ವಜವನ್ನು ಅಡಿಪಾಯದ ಮೇಲೆ ನೆಟ್ಟು ಪ್ರತಿಭಟಿಸಿದ್ದೇವೆ" ಎಂದು ಸಂತ್ರಸ್ತ ಕುಟುಂಬಗಳು ತಿಳಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್