ಹಾಸನ | ಅವಹೇಳನಕಾರಿ ಪೋಸ್ಟ್: ಬಜರಂಗದಳ ಮುಖಂಡನ ವಿರುದ್ಧ ಕ್ರಮಕ್ಕೆ ದಲಿತರ ಆಗ್ರಹ

  • ವಾಟ್ಸಪ್, ಫೇಸ್‌ಬುಕ್‌ನಲ್ಲಿ ದಲಿತರ ಬಗ್ಗೆ ಅವಹೇಳನಕಾರಿ ಪೋಸ್ಟ್
  • ಸಕಲೇಶಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ದಲಿತ ಮುಖಂಡರು

“ಇಸ್ಲಾಂಗೆ ದಲಿತ ಯುವಕ ಮತಾಂತರ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಗೊಂಡ ಸುದ್ದಿಗೆ ಸಕಲೇಶಪುರದ ಬಜರಂಗದಳದ ‘ಶಿವು ಜಿಪ್ಪಿ’ ಎಂಬಾತ ದಲಿತರ ಭಾವನೆಗಳು ಕೆರಳುವಂತೆ ಹೇಳಿಕೆ ನೀಡಿ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ಯತ್ನಿಸಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ದಲಿತ ಮುಖಂಡರು ಪಟ್ಟಣದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Image

“ಸಕಲೇಶಪುರದ ಬಜರಂಗದಳದ ಮುಖಂಡ ‘ಶಿವು ಜಿಪ್ಪಿ’  ಎಂಬ ವ್ಯಕ್ತಿ ಫೇಸ್‌ಬುಕ್‌ ಮತ್ತು ವಾಟ್ಸಪ್ ಮೂಲಕ “ನಾಳೆ ಸಕಲೇಶಪುರದಲ್ಲಿ ಭಾರೀ ಪ್ರತಿಭಟನೆ ಏನಾದ್ರೂ ಉಂಟಾ ಸೋಕಾಲ್ಡ್ ದಲಿತ ಹೋರಾಟಗಾರರೇ? ಸಮುದಾಯದ ಯುವಕನಿಗೆ ನ್ಯಾಯ ಕೊಡಿಸುವ ತಾಕತ್ತು ಇದೆಯಾ? ಇತ್ತೀಚೆಗೆ ಹಾಸನದಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆಯಲ್ಲಿ ಮತಾಂತರ ಕಾಯ್ದೆ ಹಿಂಪಡೆಯಿರಿ ಎಂದು ಉತ್ತರಿಸಬೇಕು. ತಮ್ಮ ನಿರೀಕ್ಷೆಯಲ್ಲಿ ಪ್ರಜ್ಞಾವಂತ ದಲಿತ ಸಮುದಾಯ ಕಾದಿದೆ!” ಎಂದು ದಲಿತರ ಭಾವನೆಗಳು ಕೆರಳುವಂತೆ ಪೋಸ್ಟ್ ಹಾಕಿದ್ದಾನೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಾಯಿ ಕಡಿತದಿಂದ ಕಂಗಾಲಾದ ಆರೂವರೆ ಸಾವಿರ ಜನ

"ಪ್ರಚೋದನಾಕಾರಿ ಪೋಸ್ಟ್ ಮಾಡಿರುವ ಶಿವು ಜಿಪ್ಪಿ ಎಂಬ ಬಜರಂಗದಳದ ಮುಖಂಡನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿಯಿಂದ ಬದುಕುತ್ತಿರುವ ದಲಿತ ಸಮುದಾಯಗಳ ಭಾವನೆಗೆ ಧಕ್ಕೆ ಉಂಟು ಮಾಡಬಾರದು" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್