ಹಾಸನ | 40 ವರ್ಷ ವಾಸವಿದ್ದ ಮನೆ ಕಳೆದುಕೊಂಡ ಕುಟುಂಬ; ಲಾರಿಯಲ್ಲಿ ವಾಸ್ತವ್ಯ

  • ದಾಖಲೆಗಳಿದ್ದರೂ ಪರಿಹಾರ ವಿತರಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಆರೋಪ
  • ಧಾರಕಾರ ಮಳೆಗೆ ಕುಸಿದು ಬಿದ್ದ ನಲವತ್ತು ವರ್ಷಗಳಿಂದ ವಾಸವಿದ್ದ ಮನೆ

ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ಚನ್ನಹಳ್ಳಿ ಗ್ರಾಮದ ಸಲೀಂ ಎಂಬವರ ಮನೆಯು ಗಾಳಿ ಮಳೆಗೆ ಕುಸಿದು ಬಿದ್ದಿದ್ದು, ಇಡೀ ಕುಟುಂಬ ಬೀದಿಯಲ್ಲಿ ನಿಲ್ಲುವಂತಾಗಿದೆ.

ಧಾರಾಕಾರ ಮಳೆಗೆ ಮನೆ ಬಿದ್ದುಹೋಗಿದೆ. ಮನೆಯ ಎಲ್ಲ ದಾಖಲೆ ಪತ್ರಗಳಿದ್ದರೂ ಮನೆ ಹೆದ್ದಾರಿ ಪಕ್ಕದಲ್ಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಸದ್ಯ ಇಡೀ ಕುಟುಂಬ ಲಾರಿಯಲ್ಲಿ ಆಶ್ರಯ ಪಡೆಯುತ್ತಿದೆ.

ಪತ್ನಿ ಮತ್ತು ಪುಟ್ಟ ಮಕ್ಕಳನ್ನು ಹೊಂದಿರುವ ಸಲೀಂ ಕುಟುಂಬಕ್ಕೆ ಆಶ್ರಯ ನೀಡಲು ಲಾರಿಗೆ ಟಾರ್ಪಲ್ ಹಾಕಿಕೊಂಡು ಬದುಕು ಸಾಗಿರುತ್ತಿದ್ದಾರೆ. ಸಲೀಂ ಮತ್ತು ಕುಟುಂಬ ಆಶ್ರಯ ಪಡೆಯುತ್ತಿರುವ ಲಾರಿ ಕೂಡ ಅವರದ್ದಲ್ಲ. ಲಾರಿ ಮಾಲೀಕರ ಅನುಮತಿ ಪಡೆದು ರಾತ್ರಿ ವೇಳೆ ಲಾರಿಯಲ್ಲಿ ಮಲಗುವ ಬಡ ಕುಟಂಬ ಪರ್ಯಾಯ ನೆಲೆ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಿಷ ದಸರಾ ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆಚರಣಾ ಸಮಿತಿ

“ಚನ್ನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಿ 40 ವರ್ಷಗಳಿಂದ ನೆಲೆಸಿದ್ದಾರೆ. ಆದರೆ, ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಇದ್ದ ಒಂದು ಮನೆ ಕುಸಿದುಬಿದ್ದಿದೆ. ಮನೆ ದುರಸ್ತಿಗೆ ಪರಿಹಾರಕ್ಕಾಗಿ ಸಲೀಂ ಅತ್ತಿಂದಿತ್ತ ಓಡಾಡುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮನೆ ಹೆದ್ದಾರಿ ಬದಿಯಲ್ಲಿ ಇದೆ ಎಂಬ ಏಕೈಕ ಕಾರಣಕ್ಕೆ ಅಧಿಕಾರಿಗಳು ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ” ಎಂದು ಸಲೀಂ ಸುದ್ದಿಗಾರರೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180