ಹಾಸನ | ಕಾಡಾನೆ ದಾಳಿಗೆ ಮೆಲೇಕೆರೆ ಗ್ರಾಮದ ನಿವಾಸಿ ಬಲಿ

  • ಗದ್ದೆಗೆ ಹೋಗಿದ್ದಾಗ ಅಟ್ಟಿಸಿಕೊಂಡು ಬಂದ ಆನೆ
  • ಆನೆ ತುಳಿತಕ್ಕೆ ಒಳಗಾಗಿ ಕೆಂಪಣ್ಣ ಸಾವು 

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ತಾಲೂಕಿನ ಸುಳ್ಳಕಿ ಮೆಲೇಕೆರೆಯಲ್ಲಿ ಆನೆ ದಾಳಿಯಿಂದ ಕೆಂಪಣ್ಣ ಎನ್ನುವವರು ಮೃತಪಟ್ಟಿದ್ದಾರೆ.

ಸೋಮವಾರ ಮುಂಜಾನೆ ಸುಮಾರು 7.30 ಹೊತ್ತಿನಲ್ಲಿ ಗದ್ದೆ ಹೋಗಿದ್ದಾಗ ಕೆಂಪಣ್ಣ ಅವರನ್ನು ಆನೆ ಅಟ್ಟಿಸಿಕೊಂಡು ಬಂದಿದೆ. ಓಡಿ ಸುಸ್ತಾಗಿ ಅವರು ಕೆಳಗೆ ಬಿದ್ದಾರೆ. ಅವರನ್ನು ಆನೆ ತುಳಿದು ಸಾಯಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ?: ಕೆಆರ್‍‌ಎಸ್‌ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ: ತಗ್ಗು ಪ್ರದೇಶದಲ್ಲಿ ಪ್ರವಾಹ ಭೀತಿ

ಮೇ 10ರಂದು ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದ ಕೂಲಿ ಕಾರ್ಮಿಕ ರವಿಕುಮಾರ್(48) ಆನೆ ತುಳಿತಕ್ಕೆ ಬಲಿಯಾಗಿದ್ದರು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಅವರ ಮೇಲೆ ಆನೆಗಳು ದಾಳಿ ಮಾಡಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180