ಹಾಸನ | ಸಕಲೇಶಪುರ ಬಳಿ ಅಪಘಾತಕ್ಕೀಡಾದ ಸಾರಿಗೆ ಬಸ್‌; 12 ಮಂದಿಗೆ ಗಾಯ

  • ಚಾಲಕನ ನಿಯಂತ್ರಣ ತಪ್ಪಿ ಅಪಘಾತ
  • 12 ಪ್ರಯಾಣಿಕರಿಗೆ ಗಾಯ

ಮಂಗಳೂರುನಿಂದ ಬೆಂಗಳೂರು ತೆರಳುತ್ತಿದ್ದ ಸರ್ಕಾರಿ ಬಸ್ ಸಕಲೇಶಪುರದ ಮಾರನಹಳ್ಳಿ ಸಮೀಪ ಮಂಗಳವಾರ ಮಧ್ಯಾಹ್ನ (ಜ.24) ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ 12 ಮಂದಿಗೆ ಗಾಯಗಳಾಗಿವೆ.

ಈ ಸುದ್ದಿ ಓದಿದ್ದೀರಾ? ಹಾಸನ | ಜೆಡಿಎಸ್‌ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆ: ಭವಾನಿ ರೇವಣ್ಣ ಘೋಷಣೆ

ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲರಿಗೂ ಗಾಯಗಳಾಗಿದ್ದು, ಅವರನ್ನೆಲ್ಲ ಸಕಲೇಶಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸಕಲೇಶಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app