ಹಾವೇರಿ | ಮನೆ– ಮನೆಗೂ ಗಿಡ, ಮರ ಅಭಿಯಾನ ಆರಂಭಕ್ಕೆ ಪ್ರಧಾನಿಗೆ ಪತ್ರ ಬರೆದ ಬಾಲಕಿ

  • ‘ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ’ ಅಭಿಯಾನದಿಂದ ಸ್ಪೂರ್ತಿ ಪಡೆದ ಬಾಲಕಿ
  • ಯು.ಕೆ.ಜಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿಯಿಂದ ವಿಶಿಷ್ಟ ಅಭಿಯಾನಕ್ಕೆ ಮನವಿ

ನಾಲ್ಕು ವರ್ಷದ ಬಾಲಕಿ ಸಾಧ್ಯಾ ಸಿಂಗ್‌ ರಜಪೂತ್ 'ಮನೆ-ಮನೆಗೂ ಗಿಡ ಮರ' ಅಭಿಯಾನ ಆರಂಭಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ.

ಸ್ವಾತಂತ್ರ್ಯದ ಅಮೃತ ಮಹೋತ್ಸದ ಪ್ರಯುಕ್ತ ಕೇಂದ್ರ ಸರ್ಕಾರವು ದೇಶಾದ್ಯಂತ  ‘ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ’  ಅಭಿಯಾನವನ್ನು ಆರಂಭಿಸಿದೆ. ಇದಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಾಲಕಿ ಸಂಧ್ಯಾ ಪ್ರೇರಣೆಗೊಂಡು ಈ ಅಭಿಯಾನ ಆರಂಭಿಸಲು ಮನವಿ ಮಾಡಿದ್ದಾಳೆ. 

“ಪ್ರೀತಿಯ ಮೋದಿಜಿ ಅವರೇ, ನೀವು ಘೋಷಿಸಿದ 'ಹರ್ ಘರ್‌ ತಿರಂಗ' ಅಭಿಯಾನವು ದೇಶಾದ್ಯಂತ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ನೀವು 'ಹರ್ ಘರ್ ಪೇಡ್ ಪೌದ' ('ಮನೆ-ಮನೆಗೂ ಗಿಡ, ಮರ') ಅಭಿಯಾನವನ್ನು ಘೋಷಣೆ ಮಾಡಬೇಕು" ಎಂದು ಬಾಲಕಿ ಪತ್ರದಲ್ಲಿ ಒತ್ತಾಯಿಸಿದ್ದಾಳೆ.

"ಪ್ರತಿ ಮನೆಯಲ್ಲೂ ಸಸಿಗಳನ್ನು ಬೆಳೆಸಿದರೆ ಎಲ್ಲರಿಗೂ ಉತ್ತಮ ಆಮ್ಲಜನಕ ದೊರೆತು, ಆರೋಗ್ಯ ಸುಧಾರಣೆಯಾಗುತ್ತದೆ” ಎಂದು ಪತ್ರದಲ್ಲಿ ವಿವರಿಸಿದ್ದಾಳೆ.

ಈ ಸುದ್ದಿ ಓದಿದ್ದೀರಾ? : ಪ್ರಧಾನಿ ಮೋದಿ ಮಿತ್ರತ್ವ ಪ್ರೇಮದಿಂದ ದೇಶದ ಆರ್ಥಿಕತೆ ಹಾಳು| ಮನೀಶ್ ಸಿಸೋಡಿಯಾ

ಬಾಲಕಿಯು ಹಾವೇರಿ ನಗರದ ಸೇಂಟ್ ಆ್ಯನ್ಸ್ ಶಾಲೆಯಲ್ಲಿ ಅಪ್ಪರ್ ಕಿಂಡರ್‍‌ ಗಾರ್ಡನ್‌ (ಯು.ಕೆ.ಜಿ) ಓದುತ್ತಿದ್ದು, ಸ್ವ ಹಸ್ತಾಕ್ಷರದಲ್ಲಿ ಪತ್ರ ಬರೆದು, ಹಾವೇರಿಯ ಅಂಚೆ ಇಲಾಖೆಯ ಮೂಲಕ ಪೋಸ್ಟ್‌ ಮಾಡಿದ್ದಾಳೆ.

ಬಾಲಕಿಯ ತಂದೆ ಜೀವನ್‌ ಸಿಂಗ್  ‘ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಮಗಳು ಬರೆದ ಪತ್ರವನ್ನು ಓದಿ ಸಂತಸಪಟ್ಟಿದ್ದಾರೆ. ಆದಷ್ಟು ಬೇಗ ಪ್ರಧಾನಿಯವರಿಗೆ ಮಗಳು ಬರೆದ ಪತ್ರ ತಲುಪಲಿ ಎಂದು ಆಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್