ರಾಜ್ಯಾದ್ಯಂತ ಮುಂದುವರೆದ ಮಳೆ: ಕೆಲವು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

  • ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಾಲಯಕ್ಕೆ ಭಕ್ತರ ನಿರ್ಬಂಧ
  • ಮಂಡ್ಯ ಜಿಲ್ಲೆ ಕೆಆರ್‍‌ಎಸ್‌ನಿಂದ ನೀರಿನ ಹರಿವು ಹೆಚ್ಚಳ, ಸೇತುವೆಗಳು ಜಲಾವೃತ

ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬೆಳಗಾವಿ  

ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆಯಿಂದಾಗಿ ಜಿಲ್ಲೆಯ ಬೆಳಗಾವಿ ತಾಲೂಕು, ಖಾನಾಪುರ ತಾಲೂಕು, ಬೆಳಗಾವಿ ನಗರದ ಅಂಗನವಾಡಿ, ಪ್ರಾಥಮಿಕ, ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ಹಾಸನ-ಕೊಡಗು

ಮಳೆಯ ಅಬ್ಬರ ಮುಂದುವರೆದಿರುವುದರಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು, ಕೊಡಗು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. 

ಮಂಡ್ಯ 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಆದ್ದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವೆಲ್ಲೆಸ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ, ಸಂಚಾರ ನಿರ್ಬಂಧಿಸಿಲ್ಲ. ಜನರು ಯಾವುದೇ ಆತಂಕವಿಲ್ಲದೆ ಓಡಾಡುತಿದ್ದಾರೆ. 

ತಾಲೂಕಿನ ಮಹದೇವಪುರದಲ್ಲಿ ನೀರಿನ ಪ್ರವಾಹದ ನಡುವೆಯೇ ಶವಹೊತ್ತು ನಡೆಯಲು ಸ್ಥಳೀಯರು ಹೈರಾಣಾದ ಘಟನೆ ಬೆಳಕಿಗೆ ಬಂದಿದೆ.

Image

ಭಾನುವಾರ (ಆಗಸ್ಟ್ 7) ಮಹದೇವಪುರ ಗ್ರಾಮದ ಸುಲೋಚನ (48) ಕ್ಯಾನ್ಸ್‌ರ್‍‌ನಿಂದ ಮೃತಪಟ್ಟದ್ದರು. ಕಾವೇರಿ ನದಿಯ ಭೋರ್ಗರೆತದಿಂದಾಗಿ ಸ್ಮಶಾನದ ರಸ್ತೆ ಸಂಪೂರ್ಣ ಮುಳುಗಿದೆ. ಪ್ರತಿ ವರ್ಷದ ಮಳೆಯಲ್ಲೂ ಸ್ಮಶಾನ ಮಾರ್ಗದ ರಸ್ತೆ ಕೆರೆಯಂತಾಗುತ್ತದೆ. ಈ ವರ್ಷವೂ ಕೂಡ ಜಲಾವೃತವಾಗಿರುವ ರಸ್ತೆಯಲ್ಲಿ ಮಹಿಳೆಯ ಮೃತ ದೇಹವನ್ನು ಹೊತ್ತೊಯ್ಯಲು ಪರದಾಡುವಂತಾಯಿತು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ

ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕೆಆರ್‍‌ಎಸ್‌ನಿಂದ ನೀರಿನ ಹರಿವು ಹೆಚ್ಚಾಗಿದೆ. ಹಾಗಾಗಿ ಸೇತುವೆಗಳು ಜಲಾವೃತಗೊಂಡಿವೆ ಎಂದು ತಿಳಿದು ಬಂದಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್