ಹುಬ್ಬಳ್ಳಿ | ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಬದಲಾವಣೆ; ಕಾರ್ಮಿಕರು ಅಸಮಾಧಾನ

  • ಎಂಜಿಎನ್ಆರ್‍‌ಇಜಿಎಸ್ ಅಡಿಯಲ್ಲಿ ಕಾರ್ಮಿಕರಿಗೆ ಸಿಗದ ವೇತನ
  • ತಂತ್ರಜ್ಞಾನ ಬದಲಾವಣೆಯಿಂದ ನಿರಾಸಕ್ತರಾದ ಕಾರ್ಮಿಕರು 

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ವೇತನ ದೊರೆತಿಲ್ಲ. ಹಾಜರಾತಿಗೆ ಸಂಬಂಧಿಸಿದ ತಂತ್ರಜ್ಞಾನದ ಬದಲಾವಣೆ ಕಾರ್ಮಿಕರನ್ನು ಯೋಜನೆಯಿಂದ ದೂರ ತಳ್ಳುತ್ತಿವೆ ಎಂದು ಜಿಲ್ಲಾ ಗ್ರಾಮೀಣ ಕಾರ್ಮಿಕರ ಸಂಘಟನೆ ಹೇಳಿರುವುದು ವರದಿಯಾಗಿದೆ.

"ಹೊಸ ತಂತ್ರಜ್ಞಾನದಿಂದ  ಕಾರ್ಮಿಕರು ಕಡಿಮೆ ಆಸಕ್ತಿ ತೋರಿಸುತ್ತಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಹಾಜರಾತಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಹಾಜರಾತಿ ಬೆಳಿಗ್ಗೆ ಒಂದು ಬಾರಿ ಮಾತ್ರ ಇರಬೇಕು" ಎಂದು ಜಿಲ್ಲಾ ಗ್ರಾಮೀಣ ಕೂಲಿಕಾರರ ಸಂಘದ ಅಧ್ಯಕ್ಷೆ ನಿರ್ಮಲಾ ಹನಸಿಯಾವರ್ ಮಾಧ್ಯಮವೊಂದಕ್ಕೆ ತಿಳಿದರು.

"ವೇತನವನ್ನು ಕಾನೂನಿನ ಪ್ರಕಾರ ಕೆಲಸದ ಆಧಾರದ ಮೇಲೆ ಪಾವತಿಸಬೇಕು ಅಥವಾ ಎಂಟು ಗಂಟೆಗಳ ಕೆಲಸದ ಸಂದರ್ಭದಲ್ಲಿ ಕನಿಷ್ಠ ವೇತನವನ್ನು ನಿಗದಿಪಡಿಸಿ ಈ ನಿಯಮವನ್ನು ಅನ್ವಯಿಸಬೇಕು" ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು ಮೃಗಾಲಯದ ಪುನಶ್ಚೇತನ: ಶಿವಮೊಗ್ಗ ಮೃಗಾಲಯಕ್ಕೆ ಕಾಡೆಮ್ಮೆಗಳ ಸ್ಥಳಾಂತರ

"ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ವೇತನವನ್ನು ಬಿಡುಗಡೆ ಮಾಡಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉದ್ಭವಿಸದಂತೆ ನಿಗಾ ವಹಿಸಬೇಕು" ಎಂದು ಅವರು ಎಚ್ಚರಿಸಿದರು.

"ಕೆಲಸಗಾರರು ಕೆಲಸ ಮಾಡಲು ತಮ್ಮದೇ ಆದ ವಸ್ತುಗಳನ್ನು ತರುತ್ತಿದ್ದರು. ಹಾಗಾಗಿ ಈ ಹಿಂದೆ ಕಾರ್ಮಿಕರಿಗೆ ದಿನಕ್ಕೆ ₹10 ಜಮಾ ಮಾಡುತ್ತಿದ್ದರು. ಆದರೆ ಜೂನ್‌ನಿಂದ ಕರ್ನಾಟಕದಲ್ಲಿ ಆ ಮೊತ್ತವನ್ನು ನಿಲ್ಲಿಸಲಾಗಿದೆ. ಪ್ರತಿ ಕಾರ್ಮಿಕನಿಗೆ ಭೌತಿಕ ವೆಚ್ಚದೊಂದಿಗೆ ವೇತನವನ್ನು ₹25  ಹೆಚ್ಚಿಸುವ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180