ಹುಬ್ಬಳ್ಳಿ-ಧಾರವಾಡದಲ್ಲಿ ಆಗಸ್ಟ್ 10ರವರೆಗೆ ಮದ್ಯ ಮಾರಾಟ ಸ್ಥಗಿತ

  • ಜುಲೈ 31ರಿಂದ ಆಗಸ್ಟ್ 9ರವರೆಗೆ ಮೊಹರಂ ಆಚರಣೆ
  • ಮಂಗಳವಾರ ಪಂಜ, ಡೋಲಿ ಮತ್ತು ತಬುತದ ಮೆರವಣಿಗೆ

ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೋಮವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಮದ್ಯ, ವೈನ್ ಶಾಪ್, ಬಾರ್ ಕ್ಲಬ್‌ಗಳನ್ನು ಮುಚ್ಚುವಂತೆ ಪೊಲೀಸ್ ಆಯುಕ್ತ ಲಭು ರಾಮ್ ಆದೇಶಿಸಿದ್ದಾರೆ.

ಜುಲೈ 31ರಿಂದ ಆಗಸ್ಟ್ 9ರವರೆಗೆ ಮೊಹರಂ ಆಚರಿಸಲಾಗುತ್ತಿದ್ದು, ಮಂಗಳವಾರ ಪಂಜ, ಡೋಲಿ ಮತ್ತು ತಬುತದ ಮೆರವಣಿಗೆ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಕಲಿ ದೇಶಭಕ್ತರ ಬಾಯಿ ಮುಚ್ಚಿಸುವ ಕೆಲಸ ಮಾಡಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

"ಎರಡು ನಗರಗಳು ಸೂಕ್ಷ್ಮವಾಗಿರುವುದರಿಂದ, ಕೆಲವರು ಕುಡಿದ ಮತ್ತಿನಲ್ಲಿ ಜನರಲ್ಲಿ ದ್ವೇಷದ ಭಾವನೆಗಳಿಂದ ಗಲಾಟೆಗೆ ಪ್ರಚೋದಿಸಬಹುದು. ಹಾಗಾಗಿ ಹುಬ್ಬಳ್ಳಿ ಉತ್ತರ, ದಕ್ಷಿಣ ಮತ್ತು ಧಾರವಾಡದ ಡಿಸಿಪಿಗಳ ವರದಿಗಳ ಆಧಾರದ ಮೇಲೆ, ಕರ್ನಾಟಕ ಅಬಕಾರಿ ಕಾಯ್ದೆ-1965ರ ಸೆಕ್ಷನ್ 21(1) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಎಲ್ಲ ಅಬಕಾರಿ ಪರವಾನಗಿ ಪಡೆದ ಅಂಗಡಿಗಳನ್ನು ಮುಚ್ಚಲು ನಾವು ಆದೇಶ ಹೊರಡಿಸಿದ್ದೇವೆ" ಎಂದು ಲಭು ರಾಮ್ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್