ಹುಬ್ಬಳ್ಳಿ | ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಕಣ್ಣಿನ ಕೆಳಗೆ ಟೂತ್ ಬ್ರಶ್ ತೆಗೆದ ವೈದ್ಯರು

  • ಎಡ ಕಣ್ಣಿನ ಕೆಳಗೆ ಸಿಲುಕಿಕೊಂಡಿದ್ದ ಟೂತ್ ಬ್ರಶ್
  • ಮುಖದ 7-8 ಸೆಂ.ಮೀ ಆಳದಲ್ಲಿ ಗಾಯ

ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ 28 ವರ್ಷದ ಮಹಿಳೆಯೊಬ್ಬರಿಗೆ ಕಣ್ಣಿನ ಕೆಳಗೆ ಸಿಲುಕಿಕೊಂಡಿದ್ದ, ಮುರಿದ ಟೂತ್‌ಬ್ರಶ್‌ಅನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ವೈದ್ಯರು ತೆಗೆದುಹಾಕಿದ್ದಾರೆ.

ಹಾವೇರಿ ಜಿಲ್ಲೆಯ ಹಿರೂರು ಗ್ರಾಮದ ವಿನೋದ ತಳವಾರ ಎಂಬವರ ನಾಲ್ಕು ವರ್ಷದ ಮಗಳು ಆಗಸ್ಟ್ 14 ರಂದು ಬೆಳಿಗ್ಗೆ ಹಲ್ಲುಜ್ಜುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ತಳವಾರ ಅವರ ಎಡ ಕಣ್ಣಿನ ಕೆಳಗೆ ಬ್ರಷ್ ಅನ್ನು ಚುಚ್ಚಿದ್ದಾಳೆ. ಕುಟುಂಬಸ್ಥರು ಬ್ರಷ್ ಅನ್ನು ಸರಿಸಲು ಪ್ರಯತ್ನಿಸಿದಾಗ ಬ್ರಷ್‌ ಮುರಿದುಹೋಗಿದೆ. ಕೂಡಲೇ ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಮಹಿಳೆಯನ್ನು ಭಾನುವಾರ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗದ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಸಿಟಿ ಆಂಜಿಯೋಗ್ರಾಮ್ ಮಾಡಿ ಪರೀಕ್ಷಿಸಿದ್ದಾರೆ. ಬ್ರಶ್‌ ಸಿಲುಕಿಕೊಂಡಿರುವುದನ್ನು ಗುರುತಿಸಿದ್ದಾರೆ. 

ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗದ ವೈದ್ಯರಾದ ಡಾ.ಮಂಜುನಾಥ್ ವಿಜಾಪುರ, ಡಾ.ವಸಂತ ಕಟ್ಟಿಮನಿ, ಡಾ.ಅನುರಾಧಾ ನಾಗನಗೌಡರ್, ಡಾ. ಸ್ಪೂರ್ತಿ ಶೆಟ್ಟಿ ಹಾಗೂ ತಂಡವು ಅರಿವಳಿಕೆ ಮತ್ತು ನೇತ್ರ ವಿಭಾಗದ ನೆರವಿನೊಂದಿಗೆ ಬುಧವಾರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

“ಎರಡು ತಿಂಗಳ ಮೊದಲು ನಾವು ಶಸ್ತ್ರಚಿಕಿತ್ಸೆಯನ್ನು ಮಾಡಿ ಹಳಿಯಾಳದ ವ್ಯಕ್ತಿಯ ಮ್ಯಾಕ್ಸಿಲೊಫೇಶಿಯಲ್ ಪ್ರದೇಶದಿಂದ 6 ಸೆಂ.ಮೀ ಚಾಕುವನ್ನು ತೆಗೆದಿದ್ದೆವು. ಆದರೆ, ಈ ಬಾರಿ ನಾವು ಅಪರೂಪದ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ. 7 ಸೆಂ.ಮೀ ಮುರಿದ ಬ್ರಷ್ ಪೀಸ್‌ಅನ್ನು ತೆಗೆದುಹಾಕಿದ್ದೇವೆ. ಚುಚ್ಚಿದ್ದ ಬ್ರಷ್‌ನಿಂದಾಗಿ ಮುಖದಲ್ಲಿ 7-8 ಸೆಂ.ಮೀ ಆಳದಲ್ಲಿ ಗಾಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಉತ್ತಮ ಸ್ಥಿತಿಯಲ್ಲಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ರೋಗಿಯನ್ನು ಬಿಡುಗಡೆ ಮಾಡಲಾಗುವುದು" ಎಂದು ಕಿಮ್ಸ್‌ನ ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗದ ಡಾ.ಮಂಜುನಾಥ್ ವಿಜಾಪುರ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180