
- ʼಡಿ ಕೆ ಶಿವಕುಮಾರ್ ಮೈತುಂಬಾ ಕಾಯಿಲೆ ಅಂಟಿಸಿಕೊಂಡು, ರೋಗಗ್ರಸ್ತರಾಗಿದ್ದಾರೆʼ
- “ಓಟರ್ ಹಗರಣದಲ್ಲಿ ಕಾಂಗ್ರೆಸ್ನವರದೇ ಕೈವಾಡ ಇದೆ ಎಂಬುದು ನಂಗೆ ಗೊತ್ತುʼ
"ಡಿ ಕೆ ಶಿವಕುಮಾರ್ಗೆ ಒಳ್ಳೆತನ ಏನಾದರೂ ಇದೆಯಾ? ಇಂತಹವರು ಇರಬೇಕಾದ ಜಾಗ ಜೈಲು. ಮುಂದೆ ಅವರು ಜೈಲಿಗೆ ಹೋಗ್ತಾರೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯ ಪಟ್ಟರು.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಅವರು, “ಜೈಲಿಗೆ ಹೋಗಿ ಬಂದಿರೋದಕ್ಕೆಲ್ಲಾ ನಾವು ಹೊಣೆಯಾಗಲು ಆಗುತ್ತಾ? ಡಿ ಕೆ ಶಿವಕುಮಾರ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಕಾನೂನು ಉಲ್ಲಂಘನೆ ಮಾಡಿದ್ದರೆ ಯಾವ ರೀತಿ ಕ್ರಮ ಆಗಬೇಕೋ ಅದು ಆಗುತ್ತದೆ” ಎಂದರು.
“ಡಿ ಕೆ ಶಿವಕುಮಾರ್ ಮೈತುಂಬಾ ಕಾಯಿಲೆ ಅಂಟಿಸಿಕೊಂಡು, ರೋಗಗ್ರಸ್ತರಾಗಿದ್ದಾರೆ. ಭ್ರಷ್ಟಾಚಾರಿಗಳು, ಮಾಲ್ ಪ್ರಾಕ್ಟೀಸ್, ಅಕ್ರಮ ಮಾಡಿ ಮತದಾರರ ಗುರುತಿನ ಚೀಟಿ ಕದ್ದೋರು ಡಿ ಕೆ ಶಿವಕುಮಾರ್. ಹೀಗೆ ತಪ್ಪು ಮಾಡಿದವರು ಜೈಲಿಗೆ ಹೋಗುತ್ತಾ ಇರುತ್ತಾರೆ” ಎಂದು ಹರಿಹಾಯ್ದರು.
“ಡಿಕೆಶಿ ಹಿನ್ನೆಲೆ ನೋಡಿದ್ರೆ ಕಾಡು, ಬೆಟ್ಟ, ನಾಡು ನುಂಗಿ ಸಿಕ್ಕಿದ್ದನ್ನು ಕಬಳಿಸಿಕೊಂಡಿದ್ದಾರೆ. ಜೇಬು ಕಳ್ಳರಂತಿರುವ ಡಿ ಕೆ ಶಿವಕುಮಾರ್ಗೆ ಮೌಲ್ಯಗಳ ಬಗ್ಗೆ ಮಾತಾಡೋಕೆ ಯಾವ ನೈತಿಕತೆ ಇದೆ? ಕೊತ್ವಾಲ್ನಂತಹ ಹಿನ್ನಲೆ ನನಗಿಲ್ಲ. ಅಂತಹವರ ಹತ್ತಿರ ಟೀ ಕುಡ್ಕೊಂಡು ಇರಲಿಲ್ಲ. ನಾನು ಜನನಾಯಕ” ಎಂದರು.
ಈ ಸುದ್ದಿ ಓದಿದ್ದೀರಾ? ಸಂದರ್ಶನ | ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಗೆದ್ದೇ ಗೆಲ್ತಾರೆ, ಮತ್ತೆ ಮುಖ್ಯಮಂತ್ರಿನೂ ಆಗ್ತಾರೆ: ಶಾಸಕ ಶ್ರೀನಿವಾಸ ಗೌಡ
“ಮತದಾರರ ಮಾಹಿತಿ ಸಂಗ್ರಹ ಪ್ರಕ್ರಿಯೆ ಚುನಾವಣೆ ಆಯೋಗದಿಂದ ನಡೆಯುತ್ತಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ ಅಕ್ರಮ ನೋಡಿದ್ರೆ ಇವರಲ್ಲಾ ಜೈಲಿನಲ್ಲಿ ಇರಬೇಕಿತ್ತು. ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡು ಬಂದವರು ಕಾಂಗ್ರೆಸ್ ಪಕ್ಷದವರು. ಇಂತಹ ಭ್ರಷ್ಟಾಚಾರಿಗಳಿಗೆ ನಾನು ಸಿಂಹಸ್ವಪ್ನ ಆಗಿರುವೆ” ಎಂದರು.
“ಮತದಾರರ ಮಾಹಿತಿ ಕಳವು ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪ್ರತಿ ದಿನ ಇವರೇ ತನಿಖೆ ಮಾಡೋ ರೀತಿ ಕಾಂಗ್ರೆಸ್ ಬಿಲ್ಡಪ್ ಕೊಡುತ್ತಿದೆ. ಕಾಂಗ್ರೆಸ್ನವರು ದಿವಾಳಿಯಾಗಿದ್ದಾರೆ, ಅವರಿಗೆ ಹೇಳೋಕೆ ಏನೂ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಯಾರು ಮಾಡೋದಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ಮಾಡುತ್ತಿದ್ದಾರೆ. ಇವೆಲ್ಲವೂ ಕಾಂಗ್ರೆಸ್ನವರದೇ ಕೈವಾಡ ಇರುತ್ತದೆ. ನನಗೆ ಎಲ್ಲವೂ ಗೊತ್ತಿದೆ” ಎಂದು ಹೇಳಿದರು.