ಪ್ರಧಾನಿ ನರೇಂದ್ರ ಮೋದಿ ಮುತ್ತಿಗೆಗೆ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ನಿರ್ಧಾರ

Modi
  • ಕೇಂದ್ರ ಸರ್ಕಾರದ ನಡೆ ಖಂಡಿಸಲು ಕಿಸಾನ್‌ ಕಾಂಗ್ರೆಸ್‌ ರಾಜ್ಯ ಕಾರ್ಯಕಾರಿಣಿಯಲ್ಲಿ ತೀರ್ಮಾನ
  • ಸೂಕ್ತ ರಕ್ಷಣೆ, ಭದ್ರತೆ ಒದಗಿಸುವಂತೆ ರಾಜ್ಯ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮೀಗಾ ಮನವಿ

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಿಸಾನ್‌ ಘಟಕ ಮೋದಿ ಮುತ್ತಿಗೆ ತೀರ್ಮಾನಿಸಿದೆ.

ಈ ಕುರಿತು ಭಾನುವಾರ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ಪ್ರಕಟಣೆ ಹೊರಡಿಸಿದೆ. ರಾಹುಲ್‌ ಗಾಂಧಿಗೆ ಇಡಿ ಬಳಸಿಕೊಂಡು ಷಡ್ಯಂತ್ರ ರೂಪಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಲು ರಾಜ್ಯ ಕಾರ್ಯಕಾರಿಣಿ ನಿರ್ಣಯಿಸಿದೆ ಎಂದು ಘಟಕ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ವತಿಯಿಂದ ಯಲಹಂಕ ಏರ್‌ ಬೇಸ್‌ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ ಎಂದು ಘಟಕ ಪ್ರಕಟಣೆಯಲ್ಲಿ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಅಗ್ನಿಪಥ್: ಪ್ರತಿಭಟನೆಯ ಕಿಚ್ಚನ್ನು ತಣ್ಣಗಾಗಿಸಲು ಪಂಚಸೂತ್ರ ಘೋಷಿಸಿದ ಕೇಂದ್ರ ಸರ್ಕಾರ

ಡೈರೆಕ್ಟರ್‌ ಜನರಲ್‌ ಮತ್ತು ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಅವರಿಗೆ ಚಳವಳಿ ಸಂದರ್ಭದಲ್ಲಿ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸುವಂತೆ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮೀಗಾ ಪ್ರಕಟಣೆಯಲ್ಲಿ  ಮನವಿ ಮಾಡಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್