ಕೋಲಾರ | ದಲಿತ ಬಾಲಕನ ಶಿಕ್ಷಣದ ವೆಚ್ಚವನ್ನು ಇಲಾಖೆಯೇ ಭರಿಸಲಿದೆ: ಕೋಟ ಶ್ರೀನಿವಾಸ ಪೂಜಾರಿ

  • ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜುಕೋಲು ಮುಟ್ಟಿದ ಪ್ರಕರಣ
  • ಜಿಲ್ಲಾಡಳಿತದಿಂದ ನಿವೇಶನ, 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ 

ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜುಕೋಲು ಮುಟ್ಟಿದಕ್ಕೆ ದೌರ್ಜನ್ಯಕ್ಕೆ ಒಳಗಾದ ದಲಿತ ಬಾಲಕನ ಶಿಕ್ಷಣದ ವೆಚ್ಚವನ್ನು ಇಲಾಖೆಯೇ ಭರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದಲಿತ ಬಾಲಕನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ವಿಶೇಷ ಅನುದಾನದಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಮನೆ ನಿರ್ಮಿಸಲು ಜಿಲ್ಲಾಡಳಿತ ಈಗಾಗಲೇ ಜಾಗ ಗುರುತಿಸಿದೆ ಎಂದರು.

ಉಳ್ಳೇರಹಳ್ಳಿ ಗ್ರಾಮದ ಬಾಲಕನ ಪೋಷಕರಿಗೆ ಮನೆ ನಿರ್ಮಾಣದ ಆದೇಶ ಪ್ರತಿ ಮತ್ತು ನಿವೇಶನ ಮಂಜೂರು ಆದೇಶ ಪ್ರತಿಯನ್ನು ಹಸ್ತಾಂತರಿಸಲಾಗಿದೆ. ಪಿಯುಸಿಯಿಂದ ಪದವಿ ಶಿಕ್ಷಣದವರೆಗಿನ ಎಲ್ಲ ವೆಚ್ಚವನ್ನು ಇಲಾಖೆ ಭರಿಸಲಿದೆ ಎಂದು ಹೇಳಿದರು.

ಅಸ್ಪೃಶ್ಯತೆ ಹೋಗಲಾಡಿಸಲು ಸರ್ಕಾರದಿಂದ ಮೆಗಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಕೋಲಾರ | ಉಳ್ಳೇರಹಳ್ಳಿ ಗ್ರಾಮಕ್ಕೆ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಭೇಟಿ: ದಲಿತ ಕುಟುಂಬಕ್ಕೆ ಸಾಂತ್ವನ

ಕೋಲಾರ ಜಿಲ್ಲೆ ಮಾಲೂರು ತಾಲೂಕು ಉಳ್ಳೇರಹಳ್ಳಿ ಗ್ರಾಮದಲ್ಲಿ ಭೂತಮ್ಮನ ಉತ್ಸವದ ಸಂದರ್ಭದಲ್ಲಿ ದೇವರ ಗುಜ್ಜುಕೋಲು ಮುಟ್ಟಿದ ಬಾಲಕನಿಗೆ ಥಳಿಸಿ, 60 ಸಾವಿರ ರೂಪಾಯಿ ದಂಡ ವಿಧಿಸಿ, ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕಲು ಕೆಲವರು ನಿರ್ಧಸಿದ್ದರು. ಈ ಘಟನೆಗೆ ರಾಜ್ಯದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್