ಕೋಲಾರ | ದ್ವಿಚಕ್ರ ವಾಹನಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ಕಾರು ಡಿಕ್ಕಿ; ಸವಾರ ಸಾವು

  • ಮೃತ ವ್ಯಕ್ತಿ ಪಾತಪಲ್ಲಿ ಗ್ರಾಮದ ರಾಜಣ್ಣ
  • ಬಿಜೆಪಿ ಅಧ್ಯಕ್ಷರ ಕಾರು ಚಾಲಕ‌ ಚರಣ್ ಬಂಧನ 

ಶ್ರೀನಿವಾಸಪುರ-ಚಿಂತಾಮಣಿ ಮುಖ್ಯರಸ್ತೆಯ ಪಾತಪಲ್ಲಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ ವೇಣುಗೋಪಾಲ್‌ ಅವರು ಸಂಚರಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಪಾತಪಲ್ಲಿ ಗ್ರಾಮದ ರಾಜಣ್ಣ(50) ಎಂದು ಗುರುತಿಸಲಾಗಿದೆ. ಕಾರು ಅತಿ ವೇಗವಾಗಿ ಚಲಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ಖಾಸಗಿ ಬಸ್ ಪಲ್ಟಿ; ಇಬ್ಬರ ದುರ್ಮರಣ

ಶ್ರೀನಿವಾಸಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಕಾರು ಚಾಲಕ‌ ಚರಣ್ ಎಂಬವರನ್ನು ಬಂಧಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್