ಕೋಲಾರ | ದಲಿತ ಕುಟುಂಬಕ್ಕೆ ಜೀವ ಬೆದರಿಕೆ: ಎಸ್‌ಸಿ-ಎಸ್‌ಟಿ ಕಲ್ಯಾಣ ಸಮಿತಿಗೆ ದೂರು

  • ಉಳ್ಳೇರಹಳ್ಳಿ ದಲಿತ ಬಾಲಕ ಗುಜ್ಜುಕೋಲು ಮುಟ್ಟಿದ ಪ್ರಕರಣ
  • ವಾಹನದಿಂದ ಗುದ್ದಿಸಿ ಸಾಯಿಸುವುದಾಗಿ ಬೆದರಿಕೆ ಆರೋಪ

ಕೋಲಾರ ಜಿಲ್ಲೆ ಮಾಲೂರು ತಾಲೂಕು ಉಳ್ಳೇರಹಳ್ಳಿ ಗುಜ್ಜುಕೋಲು ಮುಟ್ಟಿದ ಪ್ರಕರಣ ಬಗೆಹರಿದ ಬಳಿಕ ವಾಹನದಿಂದ ಗುದ್ದಿಸಿ ಹತ್ಯೆ ಮಾಡುವುದಾಗಿ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಲಿತ ಬಾಲಕನ ತಾಯಿ ಶೋಭ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ.

ದಲಿತ ಬಾಲಕ ದೇವರ ಗುಜ್ಜುಕೋಲು ಮುಟ್ಟಿದ ಪ್ರಕರಣ ತೀವ್ರ ಸ್ವರೂಪ ಪಡೆದ ಬಳಿಕ ಶುಕ್ರವಾರ ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಉಳ್ಳೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತ್ತು. 

“ಕೂಲಿ ಕೆಲಸಕ್ಕೆ ತೆರಳಲು ಉಳ್ಳೇರಹಳ್ಳಿ ಗ್ರಾಮದಿಂದ ಟೇಕಲ್ ರೈಲು ನಿಲ್ದಾಣಕ್ಕೆ ನಡೆದು ಹೋಗಬೇಕು. ಈ ದಾರಿಯಲ್ಲಿ ಹೋಗುವಾಗ ವಾಹನದಿಂದ ಡಿಕ್ಕಿ ಹೊಡೆಸಿ ಸಾಯಿಸುವುದಾಗಿ ಕೆಲ ವ್ಯಕ್ತಿಗಳು ಮಾತನಾಡಿಕೊಂಡಿದ್ದಾರೆ ಎಂದು ನನ್ನ ತಂಗಿ ಹೇಳಿದ್ದಾಳೆ. ನನಗೆ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು” ಎಂದು ಶೋಭ ಕೋರಿದ್ದಾರೆ.

“ಊರು ಬಿಟ್ಟು ಹೋಗುವಂತೆ ಕೆಲವರು ಒತ್ತಡ ಹೇರಿದ್ದರು. ಅಂಬೇಡ್ಕರ್ ಸಂಘದವರು ರಾತ್ರಿ ಮನೆಗೆ ಬಂದು ಸಹಾಯ ಮಾಡದಿದ್ದರೆ ನಾವು ಬದುಕುಳಿಯುತ್ತಿರಲಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ದೇವರು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ ಹಾಕಿದ ಬಲಾಢ್ಯರು: ಗ್ರಾಮದಿಂದ ಬಹಿಷ್ಕಾರ

“ಜೀವ ಬೆದರಿಕೆ ಹಾಕಿರುವ ಬಗ್ಗೆ ತನಿಖೆ ನಡೆಸಲಾಗುವುದು. ಸರ್ಕಾರದಿಂದ ಎಲ್ಲ ರೀತಿಯಲ್ಲಿ ರಕ್ಷಣೆ ನೀಡುತ್ತೇವೆ” ಎಂದು ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ ಪಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180