ಕೋಲಾರ | ಠಾಣೆಯಲ್ಲಿ ಮದ್ಯಪಾನ: ಮೂವರು ಪೊಲೀಸರ ಅಮಾನತು

  • ಎಣ್ಣೆ ಪಾರ್ಟಿ ಮಾಡಿದ್ದ ವಿಡಿಯೋ ವೈರಲ್‌
  • ಒಂದು ವರ್ಷದ ಹಳೆಯ ವಿಡಿಯೋ ಎಂದ ಎಸ್‌ಪಿ

ಪೊಲೀಸ್‌ ಠಾಣೆಯಲ್ಲಿ ಕರ್ತವ್ಯದ ಸಮಯದಲ್ಲಿಯೇ ಮದ್ಯಪಾನ ಸೇವಿಸಿ, ಪಾರ್ಟಿ ಮಾಡಿದ್ದ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಕೋಲಾರ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್‌ ಠಾಣೆಯಲ್ಲಿ ಮದ್ಯ ಸೇವಿಸಿ, ಬಾಡೂಟ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪೊಲೀಸರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. 

ವೈರಲ್‌ ಆಗಿದ್ದ ವಿಡಿಯೋ ಕುರಿತು ತನಿಖೆ ನಡೆಸಲಾಗಿದ್ದು, ವಿಡಿಯೋದಲ್ಲಿರುವುದು ಕಾನ್‌ಸ್ಟೆಬಲ್‌ ಚಲಪತಿ, ರಮೇಶ್ ಬಾಬು, ಮಂಜುನಾಥ್ ಎಂದು ತಿಳಿದು ಬಂದಿತ್ತು. ಅವರು ಗೌನಿಪಲ್ಲಿ ಠಾಣೆಯಲ್ಲೇ ಮದ್ಯ ಸೇವಿಸುತ್ತಿರುವುದು ಧೃಡಪಟ್ಟಿತ್ತು. 

ಮದ್ಯ ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆಂದು ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕೋಲಾರ | ಧೈರ್ಯವಾಗಿ ದೂರು ನೀಡಿದರೆ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ; ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್

ಮೂವರು ಪೊಲೀಸರು ರಾತ್ರಿ ಸಮಯದಲ್ಲಿ ಠಾಣೆಯಲ್ಲಿ ಮಾಂಸದೂಟದ ಜೊತೆ ಮದ್ಯ ಸೇವಿಸುತ್ತಾ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ವ್ಯಕ್ತಿಯೊಬ್ಬರೊಂದಿಗೆ ಮೊಬೈಲ್‌ನಲ್ಲಿ ತೆಲುಗಿ ಭಾಷೆಯಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆದರೆ, ವಿಡಿಯೋ ಮಾಡಿರುವುದು ಯಾರೆಂದು ತಿಳಿದುಬಂದಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180