ಕೋಲಾರ | ದಲಿತ ಬಾಲಕನ ಮೇಲೆ ದೌರ್ಜನ್ಯ ಖಂಡಿಸಿ 'ಉಳ್ಳೇರಹಳ್ಳಿ ಚಲೋ'

  • ನಾನಾ ಪ್ರಗತಿಪರ ಸಂಘಟನೆಗಳ ನೂರಾರು ಮಂದಿ ಭಾಗಿ 
  • ಉಳ್ಳೇರಹಳ್ಳಿ ಭೂತಮ್ಮನ ದೇವಾಲಯಕ್ಕೆ ಮುತ್ತಿಗೆ, ಆಕ್ರೋಶ 

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜುಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಥಳಿಸಿ ದಂಡ ವಿಧಿಸಿ, ಆತನ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದನ್ನು ಖಂಡಿಸಿ ಖಂಡಿಸಿ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ಉಳ್ಳೇರಹಳ್ಳಿ ಚಲೋ ಹಮ್ಮಿಕೊಳ್ಳಲಾಗಿತ್ತು.

ನಾನಾ ಪ್ರಗತಿಪರ ಸಂಘಟನೆಗಳ ನೂರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜೈ ಭೀಮ್ ಘೋಷಣೆ ಕೂಗುತ್ತಾ ದ್ವಿಚಕ್ರ ವಾಹನಗಳಲ್ಲಿ ಸಾಗಿ ಬಂದರು.

ಟೇಕಲ್ ರೈಲ್ವೆ ನಿಲ್ದಾಣದಿಂದ ಸೌಹಾರ್ದ ಜಾಥಾ ಆರಂಭಗೊಂಡು ಉಳ್ಳೇರಹಳ್ಳಿಯ ಸಂತ್ರಸ್ತ ಕುಟುಂಬದ ನಿವಾಸಕ್ಕೆ ತೆರಳಿತು. ಬಳಿಕ ಉಳ್ಳೇರಹಳ್ಳಿ ಗ್ರಾಮದ ಭೂತಮ್ಮನ ದೇವಾಲಯಕ್ಕೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆ, ರೈತ ಸಂಘಟನೆ, ಮಹಿಳೆ ಸಂಘಟನೆ, ಸಿಪಿಐಎಂ, ಕನ್ನಡಪರ ಸಂಘಟನೆ, ಮುಸ್ಲಿಂ ಸಂಘಟನೆ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ದಂಡ ಕಟ್ಟಿದರೆ ದೇವರನ್ನು ಮುಟ್ಟಲು ಬಿಡುವರೆ?: ಕಾಂಗ್ರೆಸ್ ಮುಖಂಡ ಆರ್ ಧರ್ಮಸೇನ ಪ್ರಶ್ನೆ

ಘಟನೆ ಹಿನ್ನೆಲೆ

ಉಳ್ಳೇರಹಳ್ಳಿಯಲ್ಲಿ ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಗುಜ್ಜುಕೋಲು ಕೆಳಕ್ಕೆ ಬಿದ್ದಾಗ ಅದನ್ನು ಚೇತನ್ ಎಂಬ ದಲಿತ ಬಾಲಕ ಎತ್ತಿ ಕೊಟ್ಟಿದ್ದ. ಆ ಕಾರಣಕ್ಕೆ ಕೋಲು ಮೈಲಿಗೆಯಾಯಿತು ಎಂದು ಬಾಲಕನನ್ನು ಥಳಿಸಿ 60 ಸಾವಿರ ದಂಡ ವಿಧಿಸಲಾಗಿತ್ತು. ದಂಡ ಕಟ್ಟಲು ಆಗದಿದ್ದರೆ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದರು. ಇದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180