
- ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹಿಂದೂಗಳೂ ಮುಸ್ಲಿಂ ಹಬ್ಬ ಆಚರಣೆ
- ಜಾತಿ-ಧರ್ಮದ ಎಲ್ಲೆ ಮೀರಿ ದೇವರನ್ನು ಕಾಣುತ್ತಿರುವ ಜನಸಾಮಾನ್ಯರು
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಮ್ಮನ ಜಾತ್ರೆಯಲ್ಲಿ ಸಾಕಷ್ಟು ಮುಸ್ಲಿಂ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತಿರುವುದು ಕಂಡುಬರುತ್ತಿದೆ.
ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಹಿಂದೂಗಳೂ ಮೊಹರಂ ಸೇರಿದಂತೆ ಮುಸ್ಲಿಂ ಹಬ್ಬಗಳನ್ನು ಆಚರಿಸುವುದು, ಮನೆಗಳಿಗೆ ಹೋಗಿ ಹಬ್ಬದೂಟ ಮಾಡುವ ಸಂಪ್ರದಾಯ ಈವರೆಗೂ ಆಚರಣೆಯಲ್ಲಿದೆ. ಅಂತೆಯೇ ಮುಸ್ಲಿಮರು ಜಾತ್ರೆಗಳಿಗೆ ಬಂದು ನಮಸ್ಕರಿಸುತ್ತಾರೆ. ಗಂಗಾವತಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲೂ ಪ್ರಸಕ್ತ ಜಾತ್ರೆ ನಡೆಯುತ್ತಿದ್ದು, ಅಲ್ಲಿಗೆ ಸಾಕಷ್ಟು ಮಂದಿ ಮುಸ್ಲಿಂ ಭಕ್ತರು ಆಗಮಿಸುತ್ತಿದ್ದಾರೆ.
ದುರ್ಗಾದೇವಿ ದೇವಸ್ಥಾನ ಗಂಗಾವತಿ ನಗರದಲ್ಲೇ ಇದ್ದು, ಐದು ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯುತ್ತದೆ. ಈ ಭಾಗದ ದೇವಿ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಸಣ್ಣ ಮಟ್ಟದಲ್ಲಿ ರಥೋತ್ಸವ ನಡೆಯುತ್ತದೆ. ಮುಂದೆ 3, 5, 7, 11 ಹೀಗೆ ಬೆಸ ವರ್ಷಗಳ ಅಂತರದಲ್ಲಿ ದೊಡ್ಡ ಮಟ್ಟದ ಜಾತ್ರೆಗಳು ನಡೆಯುತ್ತವೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹನುಮಮಾಲೆ ಧಾರಣೆ; ಧರ್ಮ ರಾಜಕಾರಣದ ನಡುವೆ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ವ್ಯಕ್ತಿ
ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಧರ್ಮರಾಜಕರಣ ನಡೆಯುತ್ತಿರುವ ಪ್ರಸ್ತುತ ಕಾಲದಲ್ಲಿ, ಜನಸಾಮಾನ್ಯರು ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ದೇವರನ್ನು ಕಾಣುತ್ತಿದ್ದಾರೆ ಎನ್ನುವುದಕ್ಕೆ ಹಲವು ದೇವಸ್ಥಾನಗಳು, ಜಾತ್ರೆಗಳು ಸಾಕ್ಷಿಯಾಗಿವೆ.