
- ʼನಾನು ಸಿಎಂ ಆದರೆ ಒಬ್ಬರು ಜೈಲಿಗೆ, ಇನ್ನೊಬ್ಬರು ಕಾಡಿಗೆ ಹೋಗುತ್ತಾರೆʼ
- 'ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿ'
ನಾನು ಮುಖ್ಯಮಂತ್ರಿಯಾದರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೂಚ್ಯವಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೇಳಿಬಂದಿರುವ ಆರೋಪ ತನಿಖೆಗೆ ಹೈಕೋರ್ಟ್ ಆದೇಶ ನೀಡಿದ ವಿಚಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೂಚ್ಯವಾಗಿ ವಿಧಾನಸೌಧದಲ್ಲಿ ಮಾತನಾಡಿದರು.
“ಎಷ್ಟೇ ದೊಡ್ಡ ಹುಲಿ ಇದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್.ಕೆ ಅಡ್ವಾಣಿ ಮೇಲೆ ಆರೋಪ ಕೇಳಿಬಂದಾಗ ಎಲ್ಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಾಹುಲಿ ಇರಲಿ, ಯಾರೇ ಇರಲಿ ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದರು.
ಎಲ್ ಕೆ ಅಡ್ವಾಣಿ, ವಾಜಪೇಯಿಗಿಂತ ದೊಡ್ಡವರಾ ಅವರು? ಕೊನೆಪಕ್ಷ ಅಡ್ವಾಣಿ ಅವರ ಆದರ್ಶ ಪಾಲಿಸಲಿ. ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಂಪುಟ ಮುನಿಸು | 'ಇನ್ನೊಂದು ವಾರ ಕಾದು ನೋಡುವೆ': ಬಿಜೆಪಿಗೆ ಗಡುವು ನೀಡಿದ ಆರ್ ಶಂಕರ್
ಕಾಂಗ್ರೆಸ್ ನಾಯಕರಿಗೆ ಬಸವರಾಜ ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರ ಭಯವಿಲ್ಲ. ಅವರಿಗೆ ಇರುವುದು ನನ್ನ ಭಯ ಮಾತ್ರ. ಎಲ್ಲಿ ಯತ್ನಾಳ್ ಬಂದು ಬಿಡ್ತಾನೋ? ಅನ್ನೋ ಭಯವಿದೆ” ಎಂದರು.
“ಯತ್ನಾಳ್ ಸಿಎಂ ಆದ್ರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ. ಸಂಡೇ ಅಷ್ಟೇ” ಎಂದು ವ್ಯಂಗ್ಯವಾಡಿದರು.