ಮಂಡ್ಯ | ಶ್ರೀರಂಗಪಟ್ಟಣದ ದರಿಯಾ ದೌಲತ್ ವೀಕ್ಷಣೆಗೆ ಉಚಿತ ಪ್ರವೇಶ

  • ಅಮೃತ ಮಹೋತ್ಸವದ ಅಂಗವಾಗಿ ಉಚಿತ ಪ್ರವೇಶ
  • ಆಗಸ್ಟ್‌ 16ರಿಂದ ಪ್ರವೇಶ ಶುಲ್ಕ ಮರು ಆರಂಭ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ಭೇಟಿ ನೀಡುವವರಿಗೆ ಉಚಿತ ಪ್ರವೇಶ ನೀಡಲು ಸಂಸ್ಕೃತಿ ಸಚಿವಾಲಯ ಮುಂದಾಗಿದೆ.

ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (75ನೇ ವರ್ಷ) ಅಂಗವಾಗಿ ಆಗಸ್ಟ್ 5 ರಿಂದ ಆಗಸ್ಟ್ 15 ರವರೆಗೆ ಶ್ರೀರಂಗಪಟ್ಟಣದ ಬೇಸಿಗೆ ಅರಮನೆ (ದರಿಯಾ ದೌಲತ್) ವೀಕ್ಷಣೆಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದೆ.

ಸಂಸ್ಕೃತಿ ಸಚಿವಾಲಯವು ಆಗಸ್ಟ್ 15ರವರೆಗೆ ಸಂದರ್ಶಕರಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ತನ್ನ ಸುತ್ತೋಲೆಯಲ್ಲಿ ವಿವರಿಸಿದೆ. 

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಗಗನಕ್ಕೇರಿದ ಶಂಕರಪುರ ಮಲ್ಲಿಗೆ ಹೂವಿನ ಬೆಲೆ

ಆಗಸ್ಟ್‌ 16ರಿಂದ ಪ್ರವೇಶ ಶುಲ್ಕ ಮರು ಜಾರಿಗೆ ಬರಲಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರಿಗೆನ ಪ್ರವೇಶ ಶುಲ್ಕವು ಆಫ್‌ಲೈನ್‌ನಲ್ಲಿ 25 ರೂ. , ವಿದೇಶಿಯರಿಗೆ 250 ರೂ. ಇರಲಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವ ಭಾರತೀಯರಿಗೆ ಪ್ರವೇಶ ಶುಲ್ಕ 25 ರೂ. ಮತ್ತು ವಿದೇಶಿಯರಿಗೆ 250 ರೂ. ಇರಲಿದೆ ಎಂದು ಸಚಿವಾಲಯ ಹೇಳಿದೆ. 

ಪ್ರಸ್ತುತ ದಿನಗಳಲ್ಲಿ  ಪ್ರತಿನಿತ್ಯ ಬೇಸಿಗೆ ಅರಮನೆಗೆ 500ರಿಂದ 600 ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಉಲ್ಲೇಖಿಸಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್