ಮಂಗಳೂರು | ಶಿರಾಡಿ ಘಾಟ್ ರಸ್ತೆ ದುರಸ್ತಿಗೆ ಒತ್ತಾಯಿಸಿ ಉದ್ಯಮಿಗಳಿಂದ ಸಂಸದ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ

BM Road, NH 75
  • ಸಂಪೂರ್ಣ ಹದಗೆಟ್ಟಿರುವ ಬಂದರು ನಗರಿ - ರಾಜಧಾನಿ ಸಂಪರ್ಕ ರಸ್ತೆ
  • ನಷ್ಟ ಅನುಭವಿಸುತ್ತಿರುವ ಕೈಗಾರಿಕಾ ಕ್ಷೇತ್ರ ಮತ್ತು ಪ್ರವಾಸೋಧ್ಯಮ

ಬಂದರು ನಗರಿ ಮಂಗಳೂರು ಮತ್ತು ರಾಜ್ಯ ರಾಜಧಾನಿ ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಹೊಂಡ ಗುಂಡಿಯ ರಸ್ತೆಯಿಂದಾಗಿ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಮಟ್ಟದಲ್ಲೇ ಆರ್ಥಿಕ ಹೊಡೆತ ಬೀಳುತ್ತಿದೆ. ಇದೀಗ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕಾ ಸಂಘಟನೆ ಮುಖಂಡರು, ರಾಜ್ಯಸಭಾ ಸದಸ್ಯ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಿ ವಿರೇಂದ್ರ ಹೆಗ್ಗಡೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮಂಗಳೂರು - ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ಹೆದ್ದಾರಿ ಶಿರಾಡಿ ಘಾಟ್. ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ನಿತ್ಯ ಸಾವಿರಾರು ಟ್ಯಾಂಕರ್, ಟ್ರಕ್, ಬಸ್ ಮತ್ತಿತರ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ರಾಜ್ಯದ ಅತ್ಯಂತ ವಾಹನ ದಟ್ಟಣೆ ಹೊಂದಿರುವ ರಸ್ತೆಯೂ ಹೌದು. ಆದರೆ, ಇದೀಗ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕಾರಣ, ಇಲ್ಲಿನ ರಸ್ತೆಗುಂಡಿಗಳು.

Eedina App

ಕಳೆದ ಹಲವು ವರ್ಷಗಳಿಂದ ರಸ್ತೆ ಗುಂಡಿ ಸಮಸ್ಯೆ ಇದ್ದರೂ ಪರಿಹಾರ ಮಾತ್ರ ಕಂಡಿಲ್ಲ. ಹೀಗಾಗಿ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾರ್ಮಸ್ ಮತ್ತು ಇಂಡಸ್ಟ್ರಿ ಸಂಘಟನೆ, ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ ಡಿ ವಿರೇಂದ್ರ ಹೆಗ್ಗಡೆ ಅವರ ಮೊರೆ ಹೋಗಿದೆ.

NH 75
ಸಕಲೇಶಪುರದ ದೋಣಿಗಲ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತ ಆಗಿರುವುದು 

ಉದ್ಯಮಿಗಳು ವಿರೇಂದ್ರ ಹೆಗ್ಗಡೆ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಕೇಳಿಕೊಂಡಿದ್ದಾರೆ. ಹಾಸನ, ಸಕಲೇಶಪುರ, ದೋಣಿಗಲ್, ಮಾರನಹಳ್ಳಿ ರಸ್ತೆಯನ್ನು ಚತುಷ್ಪಥ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಮಾರನಹಳ್ಳಿಯಿಂದ ಅಡ್ಡಹೊಳೆವರೆಗಿನ ಘಾಟ್ ರಸ್ತೆ, ಅಡ್ಡಹೊಳೆಯಿಂದ ಬಿ.ಸಿ.ರೋಡ್ ವರೆಗಿನ ವ್ಯವಸ್ಥಿತ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಮುಗಿಸುವಂತೆ ಒತ್ತಾಯಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಮಂಡ್ಯ | ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿ; ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

“ಮಂಗಳೂರು ಪ್ರಮುಖ ವಾಣಿಜ್ಯ ಬಂದರನ್ನು ಹೊಂದಿರುವುದರಿಂದ ಹಡಗಿನಲ್ಲಿ ಬರುವ ಕಚ್ಛಾ ವಸ್ತುಗಳನ್ನು ಬೆಂಗಳೂರಿಗೆ ಸಾಗಾಟ ಮಾಡಲು ಸಾವಿರಾರು ಟ್ರಕ್ ಸಂಚರಿಸುತ್ತದೆ. ಆದರೆ, ಮಳೆಗಾಲದಲ್ಲಿ ರಸ್ತೆ ಕುಸಿತವಾಗಿ ತಿಂಗಳುಗಟ್ಟಲೆ ಹೆದ್ದಾರಿ ಬಂದ್ ಆಗುವುದರಿಂದ ಕೈಗಾರಿಕೆಗಳಿಗೆ ಆರ್ಥಿಕವಾಗಿ ಹೊಡೆತ ಬೀಳುತ್ತಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ನಷ್ಟವಾಗುತ್ತಿದೆ” ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಂ ಗಣೇಶ ಕಾಮತ್ ತಮ್ಮ ಸಮಸ್ಯೆ ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app