ಮಂಗಳೂರು ಸ್ಫೋಟ ಪ್ರಕರಣ | ಶಂಕಿತ ಶಾರೀಕ್ ಮನೆಯಲ್ಲಿ ಪೊಲೀಸರ ಶೋಧ

auto blast

ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗರೋಡಿಯಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನಾಗಿರುವ ಶಾರೀಕ್ ಎಂಬಾತನ ಮೈಸೂರಿನ ಮನೆಯ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಬಾಂಬ್‌ ಸ್ಫೋಟ ಮಾಡಿದ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿರುವ ಪೊಲೀಸರು, ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಸಿಂಗಲ್‌ ರೂಮ್‌ನಲ್ಲಿ ಶಂಕಿತ ಶಾರೀಕ್ ವಾಸವಿದ್ದ ಎನ್ನಲಾದ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು ಎಂದು ತಿಳಿದುಬಂದಿದೆ.

Eedina App
Shareeq Mangalore Blast
ಶಂಕಿತನಾಗಿರುವ ಶಾರೀಕ್

ಪೊಲೀಸರು ಗಾಯಗೊಂಡ ವ್ಯಕ್ತಿಯ ಚಿತ್ರವನ್ನು ಆತ ವಾಸವಿದ್ದ ರೂಮಿನ ಮಾಲೀಕ ಮೋಹನ್‌ ಕುಮಾರ್‌ ಅವರಿಗೆ ತೋರಿಸಿದಾಗ ಅವರು, ನಾವು ನೀಡಿದ್ದ ರೂಮಿನಲ್ಲಿ ವಾಸವಿದ್ದ ವ್ಯಕ್ತಿಯೇ ಈತ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ. ತಿಂಗಳಿಗೆ ₹1800 ಬಾಡಿಗೆ ಪಾವತಿಸುತ್ತಿದ್ದ ವ್ಯಕ್ತಿ, ಕರಾರಿನಲ್ಲಿ ಪ್ರೇಮ್‌ರಾಜ್‌ S/o ಮಾರುತಿ ಎಂದು ಬರೆಸಿ ಹುಬ್ಬಳ್ಳಿಯ ವಿಳಾಸವನ್ನು ನೀಡಿದ್ದ. ಆದರೆ, ಈತನಿಗೂ ಆ ವಿಳಾಸಕ್ಕೂ ಯಾವುದೇ ಸಂಬಂಧವಿಲ್ಲ. ಆತ ನಕಲಿ ದಾಖಲೆ ನೀಡಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ಆದರೆ ಸ್ಫೋಟ ಸಂಭವಿಸುವಾಗ ರಿಕ್ಷಾದಲ್ಲಿದ್ದ ಪ್ರಯಾಣಿಕನ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೇ, ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

"ಕುಕ್ಕರ್‌ ಬಾಂಬ್‌ ಸ್ಫೋಟದಿಂದ ಶಂಕಿತನ ಶೇ.50ರಷ್ಟು ದೇಹದ ಭಾಗಗಳು ಸುಟ್ಟು ಹೋಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಣಾಪಾಯದಿಂದ ಆತ ಪಾರಾಗಿದ್ದು, ನಿನ್ನೆ ರಾತ್ರಿಯೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆತನಿಗೆ ಇನ್ನೂ ಎಚ್ಚರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆಯ ಬಳಿಕವಷ್ಟೇ ಇನ್ನಷ್ಟು ಸತ್ಯಗಳು ಹೊರ ಬರಲಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಉಜ್ಜೋಡಿ ನಿವಾಸಿ, ಪುರುಷೋತ್ತಮ್ ಅವರ ತಲೆಯ ಭಾಗಕ್ಕೆ ಸ್ವಲ್ಪ ಗಾಯವಾಗಿದೆ. ಅವರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಪ್ರೇಮರಾಜ್‌ಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ: ಡಿಜಿಪಿ ಪ್ರವೀಣ್ ಸೂದ್

ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್‌ ದೊರೆತಿರುವ ಪ್ರೇಮರಾಜ್‌ಗೂ, ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಗಳೂರು ಸ್ಫೋಟ ಪ್ರಕರಣ | ಮತ್ತೊಮ್ಮೆ ಗುಪ್ತಚರ, ಗೃಹ ಇಲಾಖೆಯ ವೈಫಲ್ಯ ಎತ್ತಿ ತೋರಿಸಿದೆ: ಸಿದ್ದರಾಮಯ್ಯ

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಪ್ರೇಮರಾಜ್‌ ದಾಖಲೆಗಳು ಕಳವಾಗಿದ್ದವು. ಅವರಿಗೂ ಈ ಸ್ಫೋಟ ಪ್ರಕರಣಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೊದಲ್ಲಿ ಸಂಭವಿಸಿದ ಸ್ಥಳದಲ್ಲಿ ಪ್ರೇಮ್‌ರಾಜ್‌ ಹುಟಗಿ ಎಂಬ ಹೆಸರಲ್ಲಿದ್ದ ಆಧಾರ್ ಕಾರ್ಡ್ ಪತ್ತೆಯಾಗಿತ್ತು ಎಂದು ಮಾಧ್ಯಮಗಳು ವರದಿ ಬಿತ್ತರಿಸಿದ್ದವು.

ಅದಲ್ಲದೇ, ಬಸ್ಸಿನಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡಿರುವುದಾಗಿ ಪ್ರೇಮರಾಜ್ ತಿಳಿಸಿದ್ದಾರೆ. ಈ ಆಧಾರ್ ಕಾರ್ಡ್ ಬಳಸಿ ಆರೋಪಿಗಳು ಮೈಸೂರಿನಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app