ಒಂದು ನಿಮಿಷದ ಓದು| ರಾಷ್ಟ್ರ ಮಟ್ಟದ ಕಾವ್ಯ ಕಮ್ಮಟ: ಕರ್ನಾಟಕ ಸಾಹಿತ್ಯ ಅಕಾಡೆಮಿ

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ʼಕಾವ್ಯ ಕಮ್ಮಟʼವನ್ನು ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್‌ 22 ರಿಂದ ಮೂರು ದಿನಗಳ ಕಾಲ ಎಡನೀರು ಮಠದಲ್ಲಿ ನಡೆಯಲಿದೆ. 

ದೇಶದ ವಿವಿಧ ಭಾಗಗಳಿಂದ ಸುಮಾರು 60 ಶಿಬಿರಾರ್ಥಿಗಳು ಪಾಲ್ಗೊಳ್ಳಲಿರುವ ಈ ಶಿಬಿರದಲ್ಲಿ , ಕವಿ ಡಾ. ವಸಂತಕುಮಾರ ಪೆರ್ಲ ಅವರು ಕಮ್ಮಟದ ನಿರ್ದೇಶಕರಾಗಿರುತ್ತಾರೆ.

ಸೆಪ್ಟೆಂಬರ್‌ 22ರಂದು ಬೆಳಿಗ್ಗೆ ಕವಯತ್ರಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಕಮ್ಮಟ ಉದ್ಘಾಟನೆ ಮಾಡಲಿದ್ದು, ಎಡನೀರು ಮಠದ ಸ್ವಾಮೀಜಿ ಸಚ್ಚಿದಾನಂದ ಭಾರತಿ, ಕವಿ ಡಾ. ರಮಾನಂದ ಬನಾರಿ, ವಿದ್ವಾಂಸ ಲಕ್ಮೀಶ ತೋಳ್ವಾಡಿ ಮುಖ್ಯ ಅತಿಥಿಗಳಾಗಿರುವರು.

Image

ರಾಜ್ಯೋತ್ಸವ ಪಶಸ್ತಿ ಆಯ್ಕೆಗೆ ಸಮಿತಿ ರಚನೆ: ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಪುರಸ್ಕೃತರನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿ ರಚಿಸಲಾಗಿದೆ. ಕನ್ನಡ-ಸಂಸ್ಕೃತಿ ಇಲಾಖೆ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಅಕಾಡೆಮಿಗಳ ಅಧ್ಯಕ್ಷರೂ ಸೇರಿ ಒಟ್ಟು 36 ಸದಸ್ಯರು ಸಮಿತಿಯಲ್ಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180