ಮಳೆಗಾಲ ಅಧಿವೇಶನ | ‘ಸಬ್ ಅರ್ಬನ್ ಯೋಜನೆʼಗೆ ಅನಂತ್ ಕುಮಾರ್ ಹೆಸರಿಡಲು ಬಿಜೆಪಿ ಸದಸ್ಯರ ಆಗ್ರಹ

ananthakumar
  • ಬಿಜೆಪಿ ಸದಸ್ಯರ ಮನವಿಗೆ ಸಭಾಪತಿ ರಘುನಾಥ್‌ ರಾವ್‌ ಮಲ್ಕಾಪುರೆ ಸಹಮತ
  • ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ: ಸಚಿವ ವಿ.ಸೋಮಣ್ಣ ಸ್ಪಷ್ಟನೆ

‘ಸಬ್ ಅರ್ಬನ್ ಯೋಜನೆ’ ಯೋಜನೆಗೆ ದಿವಂಗತ ಅನಂತ್ ಕುಮಾರ್ ಹೆಸರಿಡಬೇಕು ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರಾದ ಗೋಪಿನಾಥ್ ಮತ್ತು ಎನ್. ರವಿಕುಮಾರ್ ಬುಧವಾರ ಒತ್ತಾಯ ಮಾಡಿದರು.

ಬಿಜೆಪಿ ಸದಸ್ಯರ ಮನವಿಗೆ ಸಭಾಪತಿ ರಘುನಾಥ್‌ ರಾವ್‌ ಮಲ್ಕಾಪುರೆ ಕೂಡ ಸಹಮತ ವ್ಯಕ್ತಪಡಿಸಿದರು. ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿ, "ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ" ತಿಳಿಸಿದರು.

‘ಸಬ್ ಅರ್ಬನ್ ಯೋಜನೆ’ ಎಂಬುದು ಈ ಹಿಂದೆ ಕೇಂದ್ರ ಸಚಿವರಾಗಿದ್ದ, ಕನ್ನಡಿಗ ದಿವಂಗತ ಅನಂತ್ ಕುಮಾರ್ ಅವರ ಕನಸಿನ ಕೂಸು. ಈ ಯೋಜನೆಗೆ ಅವರ ಹೆಸರಿಡುವುದು ಸೂಕ್ತ ಎಂದು ಗೋಪಿನಾಥ್, ಎನ್.ರವಿಕುಮಾರ್ ಪರಿಷತ್‌ ಕಲಾಪದಲ್ಲಿ ತಿಳಿಸಿದರು.
 
“ನಾನು ಬಿಜೆಪಿ ಪಕ್ಷಕ್ಕೆ ಸೇರಲು ದಿ.ಅನಂತಕುಮಾರ್ ಕಾರಣ. ಅನಂತ್ ಕುಮಾರ್ ಬಲಗೈ ಭಂಟ ಆರ್.ಅಶೋಕ್. ಅವರ ಹೆಸರು ಬಳಸಿಕೊಂಡು ಆರ್.ಅಶೋಕ್ ಮೇಲಕ್ಕೇರಿದ್ದು. ನಾನು ಉಳಿದವರೆಲ್ಲ 4, 5ನೇ ಸ್ಥಾನದಲ್ಲಿ. ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆಯನ್ನು 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗದ ಸಿವಿಲ್‌ ಕಾಮಗಾರಿಯನ್ನು ಮಾರ್ಚ್‌ ಅಂತ್ಯದಿಂದ ಆರಂಭಿಸಲು ಉದ್ದೇಶಿಸಲಾಗಿದೆ” ಎಂದು ವಿ ಸೋಮಣ್ಣ ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ಕಂದಾಯ ಇಲಾಖೆಯ ಕಾಗದ ಪತ್ರ ತಿದ್ದಿದರೆ ಕ್ರಿಮಿನಲ್ ಕೇಸ್ ದಾಖಲು: ಕಾರಜೋಳ ಎಚ್ಚರಿಕೆ

ಏನಿದು ಸಬ್ ಅರ್ಬನ್ ಯೋಜನೆ?

ಸಬ್ ಅರ್ಬನ್ ಯೋಜನೆ ಇದು 20 ಸಾವಿರ ಕೋಟಿ ರೂಪಾಯಿ ಯೋಜನೆಯಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಿದೆ. ಬೆಂಗಳೂರು ನಗರ, ಸುತ್ತಮುತ್ತಲ ನಗರ, ಪಟ್ಟಣಗಳಿಗೆ ಸಬ್ ಅರ್ಬನ್ ರೈಲು ಯೋಜನೆಯಡಿ ರೈಲು ಸಂಪರ್ಕ ಕಲ್ಪಿಸಲಾಗಿದೆ. 

ಮೆಜೆಸ್ಟಿಕ್, ದೇವನಹಳ್ಳಿ, ನೆಲಮಂಗಲ, ಬೈಯಪ್ಪನಹಳ್ಳಿ, ಚಿಕ್ಕಬಾಣಾವಾರ, ಕೆಂಗೇರಿ, ಕಂಟೋನ್ಮೆಂಟ್, ವೈಟ್ ಫೀಲ್ಡ್‌, ರಾಜನಕುಂಟೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿದ್ದು, ಸಬ್ ಆರ್ಬನ್ ರೈಲಿಗೆ ನಾಲ್ಕು ಕಾರಿಡಾರ್ಗಳೂ ಇರಲಿವೆ. ಸುಮಾರು 148 ಕಿಮೀ ಮಾರ್ಗದಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿವೆ. ಇದರಿಂದ ಬೆಂಗಳೂರಿನ ರಸ್ತೆಗಳ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app