ಮಳೆಗಾಲ ಅಧಿವೇಶನ | ಬಿಎಂಎಸ್ ಕಾಲೇಜು ಹಗರಣ ಕುರಿತು ಜೆಡಿಎಸ್ ಧರಣಿ, ಕಲಾಪ ಮುಂದೂಡಿಕೆ

sadana
  • ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಜೊತೆ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ನೇತೃತ್ವದಲ್ಲಿ ಸಂಧಾನ ಸಭೆ
  • ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ

ಬಿಎಂಎಸ್ ಕಾಲೇಜು ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕೊನೆ ದಿನದ ಕಲಾಪ ಆರಂಭಕ್ಕೂ ಮುನ್ನವೇ ಕಾಲು ಗಂಟೆ ಮುಂದೂಡಲ್ಪಟ್ಟಿದೆ.

ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾಸ್ವಾಮಿ ಮಾತನಾಡಿ, “ಬಿಎಂಎಸ್ ಕಾಲೇಜು ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

ಹೆಚ್ ಡಿ ರೇವಣ್ಣ ಮಧ್ಯೆ ಪ್ರವೇಶಿಸಿ, “ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಲವು ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ದಾಖಲೆ ಇಡಲು ನಾನು ಸಿದ್ಧ.  ಈ ಕುರಿತು ನೀವು ತನಿಖೆ ಮಾಡಿಸ್ತೀರಾ? ನಾನು ಸೂಕ್ತ ದಾಖಲೆ ಇಡಲು ವಿಫಲವಾದರೆ ನನ್ನ ಸ್ಥಾನ ಬಿಡುತ್ತೇನೆ” ಎಂದು ಸದನದಲ್ಲೇ ಸವಾಲು ಹಾಕಿದರು.

ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಬಿಕ್ಕಟ್ಟು ಶಮನಕ್ಕೆ ಸ್ಪೀಕರ್ ಮುಂದಾಗಬೇಕು. ಪ್ರತ್ಯೇಕ ಸಭೆ ಮಾಡಿ ಸಮಸ್ಯೆ ಪರಿಹಾರ ಮಾಡಿ. ಇದು ಕೊನೆಯ ದಿನದ ಸದನವಾಗಿದ್ದು, ಇದು ಹೀಗೆ ಮುಂದುವರಿದರೆ ಸದನ ನಡೆಸಲು ಸಾಧ್ಯವಾಗುವುದಿಲ್ಲ. 10 ನಿಮಿಷಗಳ ಕಾಲ ಎಲ್ಲರನ್ನು ಕರೆದು ಮಾತನಾಡಿ” ಎಂದು ಸ್ಪೀಕರ್‌ಗೆ ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ʼಪೇ ಸಿಎಂʼ ಪೋಸ್ಟರ್‌ ಆಯ್ತು ಈಗ ವಿಡಿಯೋ ಸರದಿ

ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ 

ಕಚೇರಿಗೆ ಬನ್ನಿ ಅಂತ ಕುಮಾರಸ್ವಾಮಿಗೆ ವಿಶ್ವೇಶ್ವರ್ ಹೆಗಡೆ ಕಾಗೇರಿ ಮನವಿ ಮಾಡಿದ್ದು, ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ಹೆಚ್ ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯು.ಟಿ.ಖಾದರ್, ವೆಂಕಟರಾವ್ ನಾಡಗೌಡ, ಹೆಚ್.ಡಿ.ರೇವಣ್ಣ ಸಭೆಯಲ್ಲಿ ಭಾಗಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180