ಮಳೆಗಾಲ ಅಧಿವೇಶನ | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ : ಬಿ ಎಸ್‌ ಯಡಿಯೂರಪ್ಪ ಒತ್ತಾಯ

b s y
  • ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಮಾಡಿದ್ದು, ಅವರಿಗೆ ನ್ಯಾಯ ದೊರಕಬೇಕು: ಬಿಎಸ್‌ವೈ
  • ಹಿಂದುಳಿದ ವರ್ಗ ಆಯೋಗ ವರದಿ ಬಂದ ಕೂಡಲೇ ಮೀಸಲಾತಿ ಕಲ್ಪಿಸಲು ಬದ್ಧ: ಸಿಎಂ ಬೊಮ್ಮಾಯಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುವೆ. ಈಗಲೂ ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರಿಸಿ ಎಂಬುದು ನನ್ನ ಒತ್ತಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ  ಯಡಿಯೂರಪ್ಪ, “ನಮ್ಮ ಅವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಪಂಚಮಸಾಲಿ ಸಮುದಾಯಕ್ಕೆ ಮೀಲಸಾತಿ ಕಲ್ಪಿಸಲು ಆಗಲಿಲ್ಲ”ಎಂದರು.

“ಈ ಹಿಂದೆ ಪಂಚಮಸಾಲಿ ಸಮುದಾಯವನ್ನು 3B ವರ್ಗಕ್ಕೆ ತಂದಿದ್ದೆ. ಪ್ರವರ್ಗ 2ಎ ಮೀಸಲಾತಿಗಾಗಿ ಸಮುದಾಯ ಒತ್ತಾಯಿಸಿತ್ತು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ 2ಎ ಮೀಸಲಾತಿ ಕೊಡಿಸಲು ಹಿಂದುಳಿದ ವರ್ಗ ಆಯೋಗ ವರದಿ ನೀಡಲು ಸೂಚಿಸಿದ್ದೆ” ಎಂದರು.

“ಪಂಚಮಸಾಲಿ ಸಮುದಾಯ ಕೃಷಿ ಅವಲಂಬಿತ ಸಮುದಾಯ. ವೀರಶೈವ ಲಿಂಗಾಯತ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದೆ. ಅದರ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಟ್ಟಿದ್ದೆ. ಎಲ್ಲ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ. ಈಗಲೂ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತ ಇದೆ. ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಅವರಿಗೆ ನ್ಯಾಯ ದೊರಕಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ‘ಪೇ ಸಿಎಂ’ ಪೋಸ್ಟರ್ ವಿಚಾರ ಪ್ರಸ್ತಾಪಿಸಿದ ಪಿ ರಾಜೀವ್; ತಿರುಗಿಬಿದ್ದ ಕಾಂಗ್ರೆಸ್

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, “2ಎ ಹೋರಾಟ ಪಾದಯಾತ್ರೆ ಬಂದಾಗ ಕೂಡಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸೂಚಿಸಲಾಗಿದೆ. ಅವರು ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಚರ್ಚೆ ಮಾಡಿದ್ದರು. ಅದು ಅವರ ಬದ್ಧತೆ. ಎಲ್ಲವೂ ದಾಖಲೆ ಇದೆ. ವರದಿ ಬಂದ ಕೂಡಲೇ ಕೊಡಲು ಸರ್ಕಾರ ಮೀಸಲಾತಿ ಕಲ್ಪಿಸಲು ಬದ್ಧರಾಗಿದ್ದೇವೆ” ಎಂದು ಸಭೆಗೆ ಉತ್ತರಿಸಿದರು‌.

ನಿಮಗೆ ಏನು ಅನ್ನಿಸ್ತು?
0 ವೋಟ್