ಮಳೆಗಾಲ ಅಧಿವೇಶನ | ಪಶುಸಂಗೋಪನಾ ಸಚಿವರಿಗೆ ರಾಜ್ಯದ ಕುರಿ, ಮೇಕೆ ಲೆಕ್ಕ ಕೊಟ್ಟ ಸಿದ್ದರಾಮಯ್ಯ

siddaramaih
  • ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಮೇಕೆ, ಕುರಿಗಳಿಗೆ ʼಬ್ಲೂಟಂಗ್‌ʼ ಕಾಯಿಲೆ; ಲಸಿಕೆಗೆ ಆಗ್ರಹ
  • ಬಾಗಲಕೋಟೆಗೆ 1 ಲಕ್ಷ ಲಸಿಕೆ ಪೂರೈಸುವ ಭರವಸೆ ನೀಡಿದ ಸಚಿವ ಪ್ರಭು ಚೌವ್ಹಾಣ್‌ 

ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರಿ ಮತ್ತು ಮೇಕೆಗಳ ಬರುವ ʼಬ್ಲೂಟಂಗ್‌ʼ ಕಾಯಿಲೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿ, “ರಾಜ್ಯದಲ್ಲಿ ಎಷ್ಟು ಕುರಿ, ಮೇಕೆ ಐತೆ ಅಂತ ಗೊತ್ತೇ” ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ರನ್ನೇ ಪ್ರಶ್ನಿಸಿದರು.

ಸಚಿವರಿಂದ ಸೂಕ್ತ ಉತ್ತರ ಬಾರದಿದ್ದಾಗ ಸಿದ್ದರಾಮಯ್ಯ ಅವರೇ ಉತ್ತರಿಸಿ, “2019ರ ಪ್ರಾಣಿ ಜನಗಣತಿ ಪ್ರಕಾರ ರಾಜ್ಯದಲ್ಲಿ 1 ಕೋಟಿ 10 ಲಕ್ಷ ಕುರಿಗಳು ಇದ್ದಾವೆ. ಮತ್ತು 61 ಲಕ್ಷ ಮೇಕೆಗಳು ಇದ್ದಾವೆ. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಮೇಕೆ, ಕುರಿಗಳಿಗೆ ʼಬ್ಲೂಟಂಗ್‌ʼ ಕಾಯಿಲೆ ಮಳೆಯಿಂದ ಬರುತ್ತದೆ. ಇದರಿಂದ ಸಾಕಷ್ಟು ಅವುಗಳು ಸಾಕಷ್ಟು ಸಂಖ್ಯೆಯಲ್ಲಿ ಸಾಯುತ್ತವೆ” ಎಂದರು.

ಕುರಿ ಮತ್ತು ಮೇಕೆಗಳಿಗೆ ಸೂಕ್ತ ಲಸಿಕೆ ಒದಗಿಸಬೇಕಿದೆ. ಈವರೆಗೂ ರಾಜ್ಯಕ್ಕೆ 10 ಲಕ್ಷ ಲಸಿಕೆ ಮಾತ್ರ ನೀಡಲಾಗಿದೆ. ಜಾನುವಾರುಗಳು ರೈತರ ಆಸ್ತಿ. ಹೀಗಾಗಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ಕುರಿ ಸತ್ತರೆ ರೈತರಿಗೆ 10-15 ಸಾವಿರ ಹಾನಿಯಾಗುತ್ತದೆ. ಇದಕ್ಕೂ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ನಮ್ಮ ಅವಧಿಯಲ್ಲಿ ಭ್ರಷ್ಟಾಚಾರವಾಗಿದ್ದರೆ ಸರ್ಕಾರ ನ್ಯಾಯಾಂಗ ತನಿಖೆ ಮಾಡಿಸಲಿ; ಸಿದ್ದರಾಮಯ್ಯ

ಬಾಗಲಕೋಟೆ ಜಿಲ್ಲೆಯಲ್ಲೇ ಎರಡು ಲಕ್ಷ ಕುರಿಗಳು ಇವೆ. ಆದರೆ 50 ಸಾವಿರ ಲಸಿಕೆ ಕೊಡಲಾಗಿದೆ. ಹೀಗಾಗಿ ತಕ್ಷಣ ಸರ್ಕಾರ ಲಸಿಕೆ ವಿತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವ ಪ್ರಭು ಚೌವ್ಹಾಣ್‌ “ಈ ವಾರದಲ್ಲಿ ಬಾಗಲಕೋಟೆಗೆ 1 ಲಕ್ಷ ಲಸಿಕೆಯನ್ನು ಪೂರೈಸುತ್ತೇವೆ” ಎಂದು ಭರವಸೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್